ಎನ್‌ಡಿಎ ಸರ್ಕಾರದ ಹಗರಣಗಳನ್ನು ಹುಡುಕುವ ಕಾರ್ಯದಲ್ಲಿ ತೊಡಗಿರುವ ರಾಹುಲ್ ಗಾಂಧಿ ಅವರು ಮತ್ತೊಂದು ಅಪಾಯಕಾರಿ ಎಡವಟ್ಟನ್ನು ಶನಿವಾರ ಮಾಡಿದ್ದಾರೆ. ಸರ್ಕಾರದ್ದೇ ಆದ ಸಂಸ್ಥೆಯೊಂದರ ಸಿಬ್ಬಂದಿಯನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸವದು.
ಎಚ್‌ಎಎಲ್ ಯಾವುದೋ ಸಾಮಾನ್ಯ ಖಾಸಗಿ ಸಂಸ್ಥೆಯಲ್ಲ. ಅದು ದೇಶದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆ. ಇಂಥ ಸಂಸ್ಥೆಯ ನೌಕರರನ್ನೇ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನವನ್ನು ರಾಹುಲ್ ಮಾಡಿರುವುದು ಖಂಡನೀಯ. ರಕ್ಷಣಾ ಸಂಸ್ಥೆಯ ಒಂದು ಅಂಗವನ್ನೇ ದುರ್ಬಲಗೊಳಿಸುವ ಪ್ರಯತ್ನ ಇದಾಗಿದೆ. ಯಾಕೆಂದರೆ ಎಚ್‌ಎಎಲ್ ನೌಕರರಿಗೆ ಅದರ ಕೇಂದ್ರ ಸಂಸ್ಥೆಯ ಮೇಲೆ ನಂಬಿಕೆ ಇಲ್ಲವಾದಲ್ಲಿ ಎಂಥ ಅಪಾಯ ಆಗಬಹುದು ಎಂಬುದನ್ನು ಊಹಿಸಬಹುದು.
ರಾಹುಲ್ ಗಾಂಧಿಯಂಥ ನಾಯಕರಿಗೆ ವಿಷಯದ ಸೂಕ್ಷ್ಮತೆಯನ್ನು ತಿಳಿಹೇಳುವವರು ಕಾಂಗ್ರೆಸ್‌ನಲ್ಲಿ ಯಾರೂ ಇಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.