ನಟ ಅಮಿತಾಭ್ ಬಚ್ಚನ್ ಅವರು ಉತ್ತರಪ್ರದೇಶದ ಕೆಲವು ರೈತರನ್ನು ಸಾಲಬಾಧೆಯಿಂದ ಮುಕ್ತರಾಗಿಸಲು ನಿರ್ಧರಿಸಿರುವುದು ಪ್ರಶಂಸನೀಯ. ಸಣ್ಣ ರೈತರಿಗೆ ಬೇಸಾಯ ಎಂಬುದು ಹೊರೆಯಾಗಿ ಪರಿಣಮಿಸಿದೆ. ಮಳೆ, ಅದನ್ನು ಆಧರಿಸಿದ ಬೆಳೆ ಮತ್ತು ಕೃಷಿ ಉತ್ಪನ್ನಗಳಿಗೆ ಸಿಗುವ ಬೆಲೆ ಎಲ್ಲವೂ ಅನಿಶ್ಚಯ. ಇದರ ಪರಿಣಾಮವೇ ಹತಾಶೆ ಮತ್ತು ಅತಿರೇಕದ ನಿರ್ಧಾರಗಳು.
ಸಾಲದ ಸುಳಿಗೆ ಸಿಲುಕಿದ ಅಂತಹ ಕೆಲವು ಕೃಷಿಕರಿಗೆ ಅಮಿತಾಭ್ ಸಹಾಯಹಸ್ತ ಚಾಚಲು ನಿರ್ಧರಿಸಿರುವುದು ಭರವಸೆಯ ಆಶಾಕಿರಣ. ‘ನಿಮ್ಮೊಂದಿಗೆ ನಾವಿದ್ದೇವೆ’ ಎಂದು ವಿಶ್ವಾಸ ತುಂಬುವ ಕೆಲಸ.
–ಪೂರ್ಣಿಮಾ ಮೂರ್ತಿ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.