ADVERTISEMENT

ಸದೃಢ ಉಕ್ಕಿನ ಬೇಲಿ ಅವಶ್ಯ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 23 ಜುಲೈ 2020, 19:31 IST
Last Updated 23 ಜುಲೈ 2020, 19:31 IST

ಮಾನವ- ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯು ಕಾಡಂಚಿನಗುಂಟ ಆನೆಕಂದಕಗಳನ್ನು ನಿರ್ಮಿಸಿತ್ತು. ಮಳೆನೀರಿನಿಂದ ಮಣ್ಣು ಹರಿದುಬಂದು ಆನೆಕಂದಕಗಳು ಮುಚ್ಚಿಹೋಗುತ್ತಿದ್ದುದರಿಂದ, ಕಾಡಂಚಿನಲ್ಲಿರುವ ರೈತರು ಜಮೀನಿನ ಸುತ್ತ ಬೇಲಿ ನಿರ್ಮಿಸಿ, ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ, ಆನೆಗಳ ಸಾವಿಗೆ ಕಾರಣರಾಗುತ್ತಿದ್ದರು. ಇದನ್ನು ಮನಗಂಡು ಸರ್ಕಾರ 2019ರಲ್ಲಿ ಉಕ್ಕಿನ ರೈಲು ಕಂಬಿಗಳ ಬೇಲಿ ನಿರ್ಮಿಸಲು ಕ್ರಮ ಕೈಗೊಂಡಿತು. ಬಂಡೀಪುರದ ಕಾಡಂಚಿನಲ್ಲಿ ಬೇಲಿ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಇತ್ತೀಚೆಗೆ ಆನೆಯೊಂದು ಬಂಡೀಪುರ ಹುಲಿ ಯೋಜನೆಯ ಎನ್.ಬೇಗೂರು ವಲಯದ ಬಸಾಪೂರ ಗ್ರಾಮದ ಬಳಿ ಬೇಲಿಯ ಕಂಬವನ್ನು ಮುರಿದುಹಾಕಿರುವುದು ವರದಿಯಾಗಿದೆ.

ಬೇಲಿಗೆ ಕಂಬಗಳನ್ನು ಅಳವಡಿಸುವಾಗ ಬಲಿಷ್ಠವಾದ ಕಂಬವನ್ನು ಗಟ್ಟಿಯಾದ ಕಾಂಕ್ರೀಟ್ ಕಟ್ಟೆಯಲ್ಲಿ ನೆಟ್ಟು, ರೈಲು ಕಂಬಿಗಳನ್ನು ಅಳವಡಿಸುವ ಮೂಲಕ ಆನೆಗಳು ಬೇಲಿಯನ್ನು ಮುರಿಯದಂತೆ ಮಾಡಬೇಕು. ಆನೆ- ಮನುಷ್ಯರ ಸಂಘರ್ಷ ತಪ್ಪಿಸಲು ಸದೃಢ ಉಕ್ಕಿನ ಬೇಲಿ ನಿರ್ಮಾಣ ಅಗತ್ಯ.

- ಬಸವರಾಜ ಹುಡೇದಗಡ್ಡಿ,ಮೈಸೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.