‘ಅಂಗೈಯಲ್ಲೇ ಪೊಲೀಸ್ ಸೇವೆಗಳು’ (ಪ್ರ.ವಾ., ಜೂನ್ 23) ಸುದ್ದಿಯನ್ನು ಓದಿ ಸಂತೋಷವಾಯಿತು. ಈ ಆ್ಯಪ್‌ನಿಂದ ಪೊಲೀಸರು ಜನರಿಗೆ ಎಷ್ಟರಮಟ್ಟಿಗೆ ಹತ್ತಿರವಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ವಾಸ್ತವವಾಗಿ ಪೊಲೀಸರು ಹೆಚ್ಚು ಜನಸ್ನೇಹಿಗಳಾಗಬೇಕಾದರೆ ಇನ್ನಷ್ಟು ತಾಳ್ಮೆ, ಸೌಮ್ಯ ಸ್ವಭಾವವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.
ಪೊಲೀಸರು ಈಗ ಬಹಳಷ್ಟು ಸುಧಾರಣೆಗೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ ಅವರು ಎಲ್ಲರಲ್ಲೂ ಕಳ್ಳರ ನೆರಳನ್ನು ನೋಡುವುದನ್ನು ನಿಲ್ಲಿಸಿದರೆ ಜನರು ಪೊಲೀಸರನ್ನು ಗೌರವ ಭಾವನೆಯಿಂದ ನೋಡುವುದರಲ್ಲಿ ಸಂಶಯವಿಲ್ಲ.
ಕಡೂರು ಫಣಿಶಂಕರ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.