ಚೀಟಿ ವ್ಯವಹಾರದ ಬಾಕಿ ಹಣ ನೀಡುವಂತೆ ಒತ್ತಾಯಿಸಿಬೆಂಗಳೂರು ಹೊರವಲಯದ ಕೊಡಿಗೇಹಳ್ಳಿಯಲ್ಲಿ ಮಹಿಳೆಯೊಬ್ಬರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವುದು ಹೇಯ ಮತ್ತು ಅಮಾನವೀಯ(ಪ್ರ.ವಾ., ಜೂನ್ 14). ಇಂಥ ಘಟನೆಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ. ನಮ್ಮ ಮೌಲ್ಯಗಳು ಕುಸಿಯುತ್ತಿರುವುದಕ್ಕೆ ನಿದರ್ಶನ.
ಮಾನವ ಸಮಾಜ ‘ಸಾಮಾಜಿಕ ಒಪ್ಪಂದ’ದ ಅನ್ವಯ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಒಂದೋ, ಜನರಿಗೆ ಈ ರೀತಿಯ ವ್ಯವಸ್ಥೆ ಇದೆಎಂಬ ಅರಿವಿಲ್ಲ. ಇಲ್ಲವೇ, ಈ ವ್ಯವಸ್ಥೆಯ ಮೇಲೆ ಅವರು ನಂಬಿಕೆ ಕಳೆದುಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಒಂದು ವ್ಯವಸ್ಥಿತ ಕ್ರಮ ಇದೆ. ಇದಕ್ಕೆಂದೇ ಪೊಲೀಸ್, ಕೋರ್ಟ್, ಕಾಯ್ದೆ ಇರುವುದು. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾವುದೇ ವ್ಯಕ್ತಿಗೆ ಅಧಿಕಾರ ಇಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು, ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಇಂದಿನ ತುರ್ತು. ಈ ಮೂಲಕ, ವ್ಯವಸ್ಥೆ ಮೇಲೆ ಜನರ ನಂಬಿಕೆಯನ್ನು ಹೆಚ್ಚಿಸಬೇಕಾಗಿದೆ.
–ದರ್ಶನ್ ಕೆ.ಓ.,ದೇವಿಕೆರೆ ಹೊಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.