ಅಟಲ್ ಬಿಹಾರಿ ವಾಜಪೇಯಿಯವರ ಅದೃಶ್ಯದಿಂದ ಭಾರತದ ರಾಜಕೀಯ ರಂಗದಲ್ಲೊಂದು ನಿರ್ವಾತಸ್ಥಿತಿಯ ‘ನಿರ್ಮಾಣ’! ಇರಲಿ.
ಈಗ ತುಸು ನಾಮ ಜಿಜ್ಞಾಸೆ. ‘ಅಟಲ್’ ಎಂದರೇನು? ಅದು ಮೂಲತಃ ‘ಅತುಲ್’ ಇರಬಹುದೆ? ಸಾಟಿಯಿಲ್ಲದ ಎಂಬುದು ‘ಅತುಲ್ (ಲ)’ ಶಬ್ದದ ಅರ್ಥ. (‘ಅಟಲ್’ ಸುಲಭವಾಗಿ ಇಂಗ್ಲಿಷಿನಲ್ಲಿ ATUL ಆಗುತ್ತದೆ.) ಅತುಲ್ಯ ಘೋಷ್ ಎಂಬ ಹೆಸರೊಂದನ್ನು ಸ್ಮರಿಸಿಕೊಳ್ಳಬಹುದು. ಈ ಊಹೆ (ಅಥವಾ ಊಹಾ ವಿಲಾಸ) ತಪ್ಪಾದರೂ (ಬಹುಶಃ ತಪ್ಪು) ‘ವಾಜ’ಪೇಯಿ ‘ರಾಜ’ಕೀಯದ ವಿರಳ ಪುರುಷನಾಗಿ, ‘ಸಾಟಿಯಿಲ್ಲದ ಸರದಾರ’ನಾಗಿ ಸಂದು ಹೋಗಿದ್ದಾರೆ ಎಂಬುದರ ಬಗೆಗೆ ಎರಡು ಮಾತಿರಲಾರದಲ್ಲವೆ?
–ಸಿ.ಪಿ.ಕೆ., ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.