ADVERTISEMENT

ಬ್ಯಾಂಕಿಂಗ್‌ ಸೇವೆ: ತೊಡಕಿನ ಮೂಲ ಸರಿಪಡಿಸಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಮೇ 2021, 19:30 IST
Last Updated 17 ಮೇ 2021, 19:30 IST

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ರೈತರೊಬ್ಬರು ವ್ಯವಹಾರಕ್ಕಾಗಿ ಬ್ಯಾಂಕಿಗೆ ಹೋಗಿದ್ದಾಗ, ಕನ್ನಡ ಬಾರದ ಅಲ್ಲಿನ ಮೇಲಧಿಕಾರಿಯು ಅವರನ್ನು ಸರಿಯಾಗಿ ನಡೆಸಿಕೊಳ್ಳದೆ, ಇಂಗ್ಲಿಷ್‌ ಅಥವಾ ಮರಾಠಿಯಲ್ಲಿ ಮಾತನಾಡುವಂತೆ ಹೇಳಿದ್ದು ಬೆಳಕಿಗೆ ಬಂದಿದೆ. ಇಂತಹ ಪ್ರಕರಣವೇನೂ ಹೊಸದಲ್ಲ. ಯಾಕೆಂದರೆ ರಾಜ್ಯದ ಹಲವು ಬ್ಯಾಂಕುಗಳಲ್ಲಿ ಇಂತಹವು ನಡೆಯುತ್ತಲೇ ಇರುತ್ತವೆ. ಆದರೆ ಕೆಲವು ಬಾರಿಯಷ್ಟೇ ಬೆಳಕಿಗೆ ಬರುತ್ತವೆ.

ಈ ತೊಡಕಿನ ಮೂಲ ಇರುವುದೇ ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆಯ (ಐಬಿಪಿಎಸ್‌) ಕಟ್ಟಲೆಗಳಲ್ಲಿ. 2014‌ಕ್ಕೆ ಮುನ್ನ, ಕರ್ನಾಟಕದಲ್ಲಿನ ಬ್ಯಾಂಕಿನ ಸಿಬ್ಬಂದಿಗೆ ಕನ್ನಡ ಗೊತ್ತಿರಬೇಕೆಂಬ ಕಟ್ಟಲೆಯಿತ್ತು. ಆದರೆ ಆನಂತರ ಇದಕ್ಕೆ ತಿದ್ದುಪಡಿ ತಂದು, ಕೆಲಸಕ್ಕೆ ಸೇರಿದ ಆರು ತಿಂಗಳೊಳಗೆ ಕನ್ನಡ ಕಲಿಯಬೇಕೆಂಬ ಕಟ್ಟಲೆ ತರಲಾಯಿತು. ಇದರಿಂದಾಗಿ ರಾಜ್ಯದ ಹಲವು ಬ್ಯಾಂಕುಗಳಲ್ಲಿ ಕನ್ನಡ ಗೊತ್ತಿಲ್ಲದ ಮಂದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕನ್ನಡಿಗರಿಗೆ ತಮ್ಮ ಬ್ಯಾಂಕಿಂಗ್‌ ವ್ಯವಹಾರಗಳನ್ನು ನೆರವೇರಿಸಿಕೊಳ್ಳಲು ತುಂಬಾ ತೊಡಕಾಗುತ್ತಿದೆ.

2014ಕ್ಕೆ ಮೊದಲಿದ್ದ ಐಬಿಪಿಎಸ್ ಕಟ್ಟಲೆಗಳನ್ನು ಜಾರಿಗೆ ತರುವುದೇ ಇದಕ್ಕಿರುವ ಪರಿಹಾರ. ಇದರ ಜೊತೆಗೆ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತಂದು, ಕರ್ನಾಟಕದಲ್ಲಿನ ಕೆಲಸಗಳು ಕನ್ನಡಿಗರಿಗೆ ದೊರೆಯುವಂತೆ ಮಾಡಬೇಕು. ಇವುಗಳ ಜೊತೆಗೆ ಇಡಬೇಕಾದ ಇನ್ನೊಂದು ಹೆಜ್ಜೆ ಎಂದರೆ, ಬ್ಯಾಂಕಿಂಗ್ ವಲಯವನ್ನು ರಾಜ್ಯಗಳ ತೆಕ್ಕೆಗೆ ತರುವುದು. ಒಟ್ಟಿನಲ್ಲಿ, ಕರ್ನಾಟಕದಲ್ಲಿನ ಬ್ಯಾಂಕುಗಳ ಎಲ್ಲ ಸೇವೆ, ತಿಳಿವು ಕನ್ನಡದಲ್ಲಿ ದೊರೆಯುವಂತೆ ಆಗಬೇಕು.

ADVERTISEMENT

- ವಿವೇಕ್ ಶಂಕರ್,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.