ADVERTISEMENT

ಪ್ರತಿದಿನವೂ ಯೋಗದಿನವಾಗಲಿ; ಶಾಲಾ– ಕಾಲೇಜು ಮಕ್ಕಳಿಗೆ ಯೋಗ ಪಠ್ಯವಾಗಬೇಕು

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:45 IST
Last Updated 21 ಜೂನ್ 2019, 19:45 IST

ಜಗತ್ತಿಗೆ ಭಾರತೀಯ ಋಷಿಮುನಿಗಳು ಕೊಟ್ಟ ಅನೇಕ ಅದ್ವಿತೀಯ ಕೊಡುಗೆಗಳಲ್ಲಿ ಯೋಗ ಪ್ರಮುಖವಾದುದು. ಯೋಗ ಮಾಡುವುದರಿಂದ ಹಲವಾರು ಮನೋದೈಹಿಕ ಪ್ರಯೋಜನಗಳಿರುವುದನ್ನು ನೂರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಕಂಡುಕೊಂಡಿದ್ದಾರೆ. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಯೋಗ ಸಹಕಾರಿ ಎಂದು ಆಧುನಿಕ ವೈದ್ಯ ವಿಜ್ಞಾನವೂ ಒಪ್ಪಿದೆ.

ಇಂತಹ ಮಹತ್ವದ ಯೋಗವು ಶಾಲಾ– ಕಾಲೇಜು ಮಕ್ಕಳಿಗೆ ಪಠ್ಯವಾಗಬೇಕು. ಯೋಗವನ್ನು ನಮ್ಮ ಮಕ್ಕಳಿಗೆ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕವಾಗಿ ಕಲಿಸಬೇಕಿದೆ. ಇದಕ್ಕಾಗಿ ನುರಿತ ಯೋಗ ಶಿಕ್ಷಕರ ನೇಮಕ ಆಗಬೇಕಿದೆ. ಜೂನ್ 21 ಮಾತ್ರ ಯೋಗ ದಿನವಾಗದೆ, ಪ್ರತಿದಿನವೂ ಯೋಗದಿನವಾಗಲಿ.

–ಪ್ರಶಾಂತ ಎಂ. ಕುನ್ನೂರ, ಮಾಗಣಗೇರಾ, ಯಡ್ರಾಮಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.