ಟಿಆರ್‌ಎಸ್ ಶಾಸಕರೊಬ್ಬರ ಸಹೋದರ ತೆಲಂಗಾಣದಲ್ಲಿ ಮತ್ತು ಬಿಜೆಪಿ ಶಾಸಕರೊಬ್ಬರು ಮಧ್ಯಪ್ರದೇಶದಲ್ಲಿ ಕರ್ತವ್ಯನಿರತ ಅಧಿಕಾರಿಗಳ ಮೇಲೆ ಇತ್ತೀಚೆಗೆ ಹಲ್ಲೆ ನಡೆಸಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ ತಾವಾಡುವ ಆಟವನ್ನು ಯಾರೂ ಕೇಳುವು ದಿಲ್ಲ ಎಂದು ಅವರು ತಿಳಿದಂತಿದೆ. ಬಿಜೆಪಿ ಶಾಸಕನ ಈ ದುಷ್ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಸದೀಯ ಪಕ್ಷದ ಸಭೆಯಲ್ಲಿ ಖಂಡಿಸಿರುವುದು ಸ್ವಾಗತಾರ್ಹ. ಆದರೆ, ಆಗಾಗ್ಗೆ ಮರುಕಳಿಸುತ್ತಿರುವ ಇಂಥ ಹೇಯ ಕೃತ್ಯಗಳು ಬರೀ ಆಕ್ರೋಶ, ಖಂಡನಾರ್ಹ ಹೇಳಿಕೆಗಳಿಂದಷ್ಟೇ ನಿಲ್ಲುವುದಿಲ್ಲ. ಯಾವ ಮುಲಾಜೂ ಇಲ್ಲದೆ ಶಾಸಕನ ರಾಜೀನಾಮೆಯನ್ನು ಪ್ರಧಾನಿ ಪಡೆಯಬೇಕು ಮತ್ತು ಪಕ್ಷದಿಂದ ಆತನನ್ನು ಉಚ್ಚಾಟಿಸಬೇಕು. ಚುನಾವಣೆ ಸಂದರ್ಭದಲ್ಲಿ ಪ್ರಚಾರ ಗಿಟ್ಟಿಸಿಕೊಂಡಂತೆ ಮೋದಿ ಅವರು ಅಸಲೀ ಚೌಕೀದಾರನಾಗಿ ದೇಶದ ಇತರ ಪಕ್ಷಗಳಿಗೂ ಮಾದರಿಯಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.