ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸಚಿವ ಸಂಪುಟ ರಚನೆ ಮತ್ತು ನಿಗಮ, ಮಂಡಳಿಗೆ ನೇಮಕಗಳನ್ನು ಒಂದೇ ಕಂತಿನಲ್ಲಿ ಮಾಡಲಿ. ಈ ನಿಟ್ಟಿನಲ್ಲಿ ವರಿಷ್ಠರನ್ನು ಸಂಪರ್ಕಿಸಿ ಸಮಾಲೋಚಿಸುವ ಸಲುವಾಗಿ ಅವರು ರಾಜ್ಯದ ಆಡಳಿತ ಯಂತ್ರಕ್ಕೆ ವಿರಾಮ ನೀಡಿ, ಮತ್ತೆ ಮತ್ತೆ ದೆಹಲಿಗೆ ಭೇಟಿ ನೀಡುತ್ತಾ ಕಾಲಹರಣ ಮಾಡದಿರಲಿ. ಈ ಕಾರ್ಯ ವಿಳಂಬವಾದಷ್ಟೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ, ದೋಸ್ತಿ ಸರ್ಕಾರಕ್ಕೆ ಬಡಿದ ವ್ಯಾಧಿಯು ಇವರಿಗೂ ಬಡಿಯಬಹುದು. ದೋಸ್ತಿ ಸರ್ಕಾರದಲ್ಲಿ ಸಂಪುಟ ರಚನೆ ವಿಸ್ತರಣೆ ಮತ್ತು ಪುನರ್‌ರಚನೆ ಪ್ರಹಸನಗಳು ಅಪಹಾಸ್ಯಕ್ಕೆ ಈಡಾಗಿದ್ದವು. ಈ ಕೆಲಸಗಳು ಶೀಘ್ರವಾದಷ್ಟೂ ಸರ್ಕಾರದ ಆಡಳಿತಯಂತ್ರ ಚುರುಕುಗೊಳ್ಳುತ್ತದೆ. ಹಾಗೇ ಮಾತೆತ್ತಿದರೆ ‘ವರಿಷ್ಠರು, ಹೈಕಮಾಂಡ್’ ಎಂದು ಉಲ್ಲೇಖಿಸುವುದು ಕಡಿಮೆಯಾಗಲಿ.
ರಮಾನಂದ ಶರ್ಮಾ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.