ADVERTISEMENT

ಶುಲ್ಕ ಸರಿಯೇ?

ಹರಿಕೃಷ್ಣ  ಬೆಂಗಳೂರು
Published 4 ನವೆಂಬರ್ 2018, 20:15 IST
Last Updated 4 ನವೆಂಬರ್ 2018, 20:15 IST

ಕೇಂದ್ರ ಸರ್ಕಾರವು ‘ಕ್ಯಾಶ್‌ಲೆಸ್‌’ ವ್ಯವಹಾರವನ್ನು ಪ್ರೋತ್ಸಾಹಿಸುತ್ತದೆ. ಬ್ಯಾಂಕ್‌ಗಳೂ ಗ್ರಾಹಕರಿಗೆ ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ನೀಡುವ ಮೂಲಕ ಡಿಜಿಟಲ್‌ ಹಣ ವರ್ಗಾವಣೆಗೆ ಸಹಕಾರ ನೀಡಿವೆ. ಆದರೆ ಕೆಲವು ವ್ಯಾಪಾರಿಗಳು ಕಾರ್ಡ್‌ ಮೂಲಕ ಮಾಡುವ ಪಾವತಿಗೆ ಶೇ 1 ರಿಂದ ಶೇ 2ರಷ್ಟು ಶುಲ್ಕ ವಿಧಿಸುತ್ತಾರೆ. ಇದು ಎಷ್ಟು ಸರಿ?

ವಾಸ್ತವದಲ್ಲಿ ಡಿಜಿಟಲ್‌ ವಹಿವಾಟು ವ್ಯಾಪಾರಿಗಳಿಗೂ ಅನುಕೂಲಕರ. ನಗದು ಹಣವಾದರೆ ಅದನ್ನು ಸುರಕ್ಷಿತವಾಗಿ ಸಾಗಿಸುವುದು, ಕಾಪಾಡಿಕೊಳ್ಳುವುದೇ ಮುಂತಾದ ಹಲವು ಸಮಸ್ಯೆಗಳಿರುತ್ತವೆ. ಡಿಜಿಟಲ್‌ ವಹಿವಾಟಾದರೆ ಗ್ರಾಹಕರಿಗೆ ಚಿಲ್ಲರೆ ಕೊಡುವ ಸಮಸ್ಯೆಯೂ ಇರುವುದಿಲ್ಲ. ಹೀಗೆ ವ್ಯಾಪಾರಿಗಳಿಗೆ ಅನುಕೂಲ ಆಗುತ್ತಿದ್ದರೂ ಗ್ರಾಹಕರಿಗೆ ರಿಯಾಯಿತಿ ನೀಡುವ ಬದಲು ಹೆಚ್ಚುವರಿ ಶುಲ್ಕ ವಿಧಿಸುವುದು ಸರಿಯಲ್ಲ. ವ್ಯಾಪಾರಸ್ಥರು ಈ ನಿಟ್ಟಿನಲ್ಲಿ ಯೋಚಿಸುವರೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT