ADVERTISEMENT

ವಾಚಕರ ವಾಣಿ: ತಂದೆಯ ಜಾಗದಲ್ಲಿ ಪುತ್ರ; ಒಪ್ಪಿತ ನಡೆಯಲ್ಲ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 19:30 IST
Last Updated 11 ಜೂನ್ 2021, 19:30 IST

ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವರ ಪುತ್ರ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರನ್ನು ಕಣಕ್ಕಿಳಿಸುವ ಇಂಗಿತವನ್ನು ಸಚಿವ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಜೂನ್ 10). ಪಕ್ಷದ ಅಭಿವೃದ್ಧಿಗೆ ಇಂಥ ಆಲೋಚನೆಗಳು ಸರಿಯೆನಿಸಬಹುದು. ಹಾಲಿ ಸಂಸದರು ಮತ್ತೊಂದು ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಂವಿಧಾನ ಅಡ್ಡಿ ಬರದೇ ಇದ್ದರೂ ಪ್ರಸಕ್ತ ಸಾಮಾಜಿಕ ಬೆಳವಣಿಗೆಯಲ್ಲಿ ಇಂಥ ಸ್ಪರ್ಧೆ ಅಗತ್ಯವೇ ಎಂಬ ಅಂಶ ಚರ್ಚೆಯಾಗಬೇಕು. ಮಿಗಿಲಾಗಿ, ತಂದೆಯ ಜಾಗವನ್ನು ಪುತ್ರ ತುಂಬುತ್ತಾರೆ ಎಂಬ ಮಾತು ಕೂಡ ‘ಜನತಂತ್ರ ವ್ಯವಸ್ಥೆಯಡಿ ಒಪ್ಪುವಂಥದ್ದಲ್ಲ’. ಈಗಾಗಲೇ ಸಮಾಜ ಈ ವಿಚಾರದಲ್ಲಿ ರೋಸಿ ಹೋಗಿದೆ.

ಹಾಲಿ ಸಂಸದರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಲೋಕಸಭಾ ಸದಸ್ಯತ್ವಕ್ಕೆ ಸಹಜವಾಗಿಯೇ ಮತ್ತೊಮ್ಮೆ ಚುನಾವಣೆ ನಡೆಸಬೇಕಾಗುತ್ತದೆ. ಇದರಿಂದಾಗುವ ಆರ್ಥಿಕ ಹೊರೆ, ಮಾನವ ಸಂಪನ್ಮೂಲಗಳ ಬಳಕೆ ದೃಷ್ಟಿಯಲ್ಲಿ ಇಂಥ ಅನಗತ್ಯ ಚುನಾವಣೆಯಿಂದ ಸರ್ಕಾರಕ್ಕೆ ಹೊರೆಯಾಗದೇ?

-ಡಾ. ಜಿ.ಬೈರೇಗೌಡ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.