ಹದಿನೈದು, ಇಪ್ಪತ್ತು ವರ್ಷಗಳ ಶಿಕ್ಷೆಯಾಗಿ ಸೆರೆವಾಸ ಅನುಭವಿಸುತ್ತಿರುವ ಕೈದಿಗಳಿಗೆ ಅವರ ಸನ್ನಡತೆಯನ್ನು ಗಮನಿಸಿ ಅವಧಿ ಪೂರೈಸುವುದಕ್ಕೆ ಮುನ್ನವೇ ಬಿಡುಗಡೆ ಮಾಡುವ ಹೃದಯವಂತಿಕೆ ನಮ್ಮ ಕಾನೂನಿನಲ್ಲಿ ಇದೆ. ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು 30 ವರ್ಷಗಳ ಹಿಂದೆ ಎಸಗಿದ ಒಂದು ಕೃತ್ಯಕ್ಕೆ ನ್ಯಾಯಾಲಯ ಈಗ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯ ಎಲ್ಲರಿಗೂ ಒಂದೇ ಎನ್ನುವುದಕ್ಕೆ ಇದು ನಿದರ್ಶನ.
ಇಲ್ಲಿ ಒಂದು ಪ್ರಶ್ನೆ- ಈ 30 ವರ್ಷಗಳ ಅವಧಿಯಲ್ಲಿ ಸಿಧು ಅವರಿಂದ ಮತ್ತಾವ ಘಾತಕ ನಡವಳಿಕೆಯೂ ಕಂಡುಬಂದಿಲ್ಲ. ಅದೂ ಅಲ್ಲದೆ ಅವರು ತಮ್ಮ ಉತ್ತಮ ಆಟದಿಂದ ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮೆರೆದು ದೇಶದ ಪ್ರತಿಷ್ಠೆಗೆ ಕಾರಣರಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಇವೆಲ್ಲ ಅವರ ಉತ್ತಮ ನಡ ವಳಿಕೆಗೆ ಮತ್ತು ಅವರ ಸಾರ್ವಜನಿಕ ಸೇವಾಸಕ್ತಿಗೆ ನಿದರ್ಶನಗಳು. ಹೀಗಾಗಿ, ಈ ಮೂರು ದಶಕಗಳಲ್ಲಿನ ಬದುಕು ಸಿಧು ಅವರ ಉತ್ತಮ ನಡವಳಿಕೆಗೆ ಸಾಕ್ಷಿಯಾಗಿದೆ. ನ್ಯಾಯಾಲಯವು ಸ್ವ ಇಚ್ಛೆಯಿಂದ ಅವರಿಗೆ ಶಿಕ್ಷೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಬಿಡುಗಡೆ ಮಾಡಿದರೆ, ಜನಸೇವೆ ಮಾಡಲು ಅನುವು ಮಾಡಿಕೊಟ್ಟಂತೆ ಆಗುತ್ತದೆ.
–ಸತ್ಯಬೋಧ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.