ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಧರ್ಮಸ್ಥಳ ಬಳಿಯ ಶಾಂತಿವನದಿಂದಲೇ ‘ಅಶಾಂತಿ ಪರ್ವ’ಕ್ಕೆ ನಾಂದಿಯಾಗುವ ಮಾತುಗಳನ್ನು ಆಡಿರುವುದು ವಿಪರ್ಯಾಸ.
ಸರ್ಕಾರ ರಚನೆಗೆ ಬೇಕಾಗುವಷ್ಟು ಬಹುಮತ ತಮಗೆ ದೊರೆಯದಿದ್ದಾಗ, ದೇವೇಗೌಡರ ಮನೆಯವರೆಗೂ ಹೋಗಿ ಜೆಡಿಎಸ್‌ಗೆ ಬೇಷರತ್ ಬೆಂಬಲ ಸೂಚಿಸಿದವರು ಇವರೇ ಅಲ್ಲವೇ? ತಮ್ಮ ಆಳ್ವಿಕೆಯಲ್ಲಿ ಜನಪರವಾದ ಎಷ್ಟೇ ಯೋಜನೆಗಳನ್ನು ರೂಪಿಸಿದ್ದರೂ ಅವು ಬಹುಮತ ಪಡೆಯಲು ಸಾಕಾಗಲಿಲ್ಲವಲ್ಲ? ಅವರ ಲೆಕ್ಕಾಚಾರ ಎಲ್ಲಿಯೊ ತಪ್ಪಿ ಹೋಯಿತು, ಆ ಮಾತಿರಲಿ.
ಈಗ ಬಜೆಟ್ ಮಂಡನೆಯ ವಿಚಾರವಾಗಿ ಅವರು ಆಕ್ಷೇಪ ಎತ್ತುವ ಬದಲು ಮೌನ ಧರಿಸುವುದು ಉತ್ತಮ. ಇಲ್ಲವಾದರೆ ಸರ್ಕಾರ ಮೂರಾಬಟ್ಟೆಯಾಗಿ ಜಮ್ಮು ಕಾಶ್ಮೀರದ ಗತಿ ಆದೀತು. ಅಂದು ‘ಕೈಕಟ್ಟಿ ನಿಂತವರು ಇಂದು ಕೈಕೊಡುವುದು’ ಧರ್ಮವಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.