ನಾವು ಬರ್ಬರ ಜಗತ್ತಿಗೆ ಜಾರುತ್ತಿದ್ದೇವೆಯೇ? ಗೋಹತ್ಯೆ ಗುಮಾನಿಯಿಂದ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ ಇಬ್ಬರು ಮೃತಪಟ್ಟಿರುವ ಸುದ್ದಿ ಓದಿ (ಪ್ರ.ವಾ., ಡಿ.4) ಇಂಥ ಸಂದೇಹ ಮೂಡುವುದು ಸಹಜ.
ಪುರಂದರ ದಾಸರ, ‘ಮಾನವ ಜನ್ಮ ದೊಡ್ಡದು’ ಎಂಬ ದೈವೋಕ್ತಿ ಗಾಳಿಯಲ್ಲಿ ತೂರಿಹೋಯಿತೇ? ಕೇಸರಿ ಉಡುಪಿನ ರಕ್ತ ಕಳಂಕದ ಜನರು ಖಂಡಿತ ಉದಾತ್ತ ಧ್ಯೇಯ ಮತ್ತು ಸಹನೆಯ ಪ್ರತೀಕವಾದ ಹಿಂದೂ ಧರ್ಮದ ಪ್ರತಿನಿಧಿಗಳಲ್ಲ.
ಇಂತಹ ತಪ್ಪು ವಿಶ್ವಾಸದ ಧಾರ್ಮಿಕ ಆವೇಶವನ್ನು ಬಲವಾಗಿ ಹತ್ತಿಕ್ಕಬೇಕು. ಮತ ಶ್ರದ್ಧೆಯ ಭ್ರಾಂತಿಯು ಹೋಗಿ ಚಿತ್ತಸ್ವಾಸ್ಥ್ಯ ಬಲಗೊಳ್ಳಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.