‘ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಲಾ ಹತ್ತು ಸಾವಿರ ರೂಪಾಯಿ ನೆರವು ನೀಡಿ’ ಎಂದು ವಿರೋಧ ಪಕ್ಷದ ನಾಯಕ ರಾದ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿರುವುದೇನೋ ಸರಿ. ಆದರೆ ಇದಕ್ಕೆ, ‘ನೀವು ಹೇಳಿದಂತೆ ಹತ್ತು ಸಾವಿರ ರೂಪಾಯಿ ನೆರವು ನೀಡಲು ನಾವೇನು ನೋಟ್ ಪ್ರಿಂಟ್ ಮಾಡ್ತೀವಾ?’ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಉತ್ತರ ಅಚ್ಚರಿ ಹುಟ್ಟಿಸುವಂತಿದೆ.
ಅಹುದು ಈಶ್ವರಪ್ಪನವರೇ, ನೀವು ನೀಡಿರುವ ಉತ್ತರ, ಈ ವಿಷಯದಲ್ಲಿ ತಾಳಿರುವ ದೃಢ ನಿರ್ಧಾರ ನೂರಕ್ಕೆ ನೂರರಷ್ಟು ಸರಿ. ಏಕೆಂದರೆ ನೋಟ್ ಪ್ರಿಂಟ್ ಮಾಡುವ ಅಧಿಕಾರ ಯಾವುದೇ ರಾಜ್ಯಕ್ಕೂ ಇಲ್ಲ. ಇದು ಜನಸಾಮಾನ್ಯರಿಗೂ ತಿಳಿಯದ ವಿಚಾರವೇನಲ್ಲ. ಆದರೆ ಇಲ್ಲಿ ನನ್ನದೊಂದು ನೇರ ಪ್ರಶ್ನೆ. ಕೆಲವೇ ತಿಂಗಳುಗಳ ಹಿಂದೆ, ವಿರೋಧ ಪಕ್ಷಗಳ 17 ಶಾಸಕರುಗಳನ್ನು ನಿಮ್ಮ ಪಕ್ಷದವರು ರಾತ್ರೋರಾತ್ರಿ ಖರೀದಿಸಿದಿರಲ್ಲ, ಮುಂಬೈಗೆ ಕರೆದುಕೊಂಡು ಹೋಗಿ ರಾಜೋಪಚಾರ ಮಾಡಿದಿರಲ್ಲ, ಅವರ ಶಾಸಕ ಸ್ಥಾನಗಳಿಗೆ ರಾಜೀನಾಮೆ ಕೊಡಿಸಿ, ಮತ್ತೆ ಅದೇ ಕ್ಷೇತ್ರ ಗಳಲ್ಲಿ ನಿಲ್ಲಿಸಿ, ಕೋಟಿ ಕೋಟಿ ಹಣ ಸುರಿದು ಭರ್ಜರಿಯಾಗಿ ಗೆಲ್ಲಿಸಿದಿರಲ್ಲ, ಆಗ ನೋಟ್ ಪ್ರಿಂಟ್ ಮಾಡುತ್ತಿದ್ದಿರಾ? ದಯವಿಟ್ಟು ಉತ್ತರ ಕೊಡಿ. ಉತ್ತರ ಕೊಡಲಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ.
-ಮಾನಸ, ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.