ನೇಣಿಗೆ ಕೊರಳೊಡ್ಡುವ ದಿನದ ನಿರೀಕ್ಷೆಯಲ್ಲಿದ್ದ ಕೈದಿಯೊಬ್ಬನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತೀರ್ಪು ನೀಡಿದೆ. ಈ ಕೈದಿ ಜೈಲಿನಲ್ಲಿದ್ದಾಗ ಓದಿ ಪದವೀಧರನಾದದ್ದು, ಗಾಂಧೀಜಿ ವಿಚಾರಧಾರೆಯಲ್ಲಿ ತರಬೇತಿ ಪಡೆದದ್ದು ಮತ್ತು ವಿಶೇಷವಾಗಿ, ಈ ಅವಧಿಯಲ್ಲಿ ರಚಿಸಿದ ಕವಿತೆಗಳನ್ನು ಗಮನಿಸಿ, ಆತನ ಮನಃ ಪರಿವರ್ತನೆಯಾಗಿದೆ ಎಂದು ಕೋರ್ಟ್ ಪರಿಗಣಿಸಿದ ವರದಿಯನ್ನು ಓದಿ ಹನಿಗಣ್ಣಾದೆ.
ಕೈದಿ 22 ವರ್ಷದ ಹರೆಯದಲ್ಲಿದ್ದಾಗ ಯಾವುದೋ ಕೆಟ್ಟ ಗಳಿಗೆಯಲ್ಲಿ ಮಗುವಿನ ಕೊಲೆ ಮಾಡಿದ ಅಪರಾಧಕ್ಕೆ ಗಲ್ಲು ಶಿಕ್ಷೆಯಾಗಿತ್ತು. ಮುಂಬೈ ಹೈಕೋರ್ಟ್ ಈತನ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಜೈಲಿನಲ್ಲಿ ಕಳೆದ 18 ವರ್ಷಗಳ ದೀರ್ಘ ಅವಧಿಯಲ್ಲಿ ಈ ವ್ಯಕ್ತಿ ಮನಃಪರಿವರ್ತನೆಗೆ ತನ್ನನ್ನು ತಾನು ಒಡ್ಡಿಕೊಂಡು ಯಶಸ್ವಿಯಾದ ಕಥೆ ಇದು. ನ್ಯಾಯಮೂರ್ತಿಗಳು ಪ್ರಕರಣವನ್ನು ಅವಲೋಕಿಸಿದ ವೈಖರಿಗೆ ದಂಗಾಗಿ ‘ಜೈ’ ಎಂದೆ. ಮುಂಬೈ ಹೈಕೋರ್ಟ್‌ನ ತೀರ್ಪನ್ನು ತಳ್ಳಿಹಾಕಿ, ಅಪರೂಪದಲ್ಲಿ ಅಪರೂಪದ ಪ್ರಕರಣವಿದು ಎನ್ನುತ್ತಾ ಸರ್ವೋಚ್ಚ ನ್ಯಾಯಾಲಯ ಅದ್ಭುತ ತೀರ್ಪು ನೀಡಿದೆ. ನಮ್ಮ ದೇಶದ ನ್ಯಾಯದಾನ ವ್ಯವಸ್ಥೆಯ ಅಂದ ಮತ್ತೊಮ್ಮೆ ಅನಾವರಣಗೊಂಡಿದೆ.
ವೆಂಕಟೇಶ ಮುದಗಲ್,ಕಲಬುರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.