ADVERTISEMENT

ಹೈನುಗಾರಿಕೆ: ಆಮದಿಗೆ ಆಸ್ಪದ ಬೇಡ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:45 IST
Last Updated 19 ಫೆಬ್ರುವರಿ 2020, 19:45 IST

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿ ಕೇವಲ ಪ್ರವಾಸಕ್ಕೆ ಸೀಮಿತವಾಗಿಲ್ಲ. ಅವರು ಹಲವು ಒಪ್ಪಂದಗಳಿಗೆ ಭಾರತದೊಂದಿಗೆ ಸಹಿ ಹಾಕಲಿದ್ದಾರೆ. ಅದರಲ್ಲಿ, ಅಮೆರಿಕದ ಹಾಲು ಹಾಗೂ ಕೋಳಿ ಉತ್ಪನ್ನಗಳ ಆಮದಿಗೆ ಸಂಬಂಧಿಸಿದ ವಿಚಾರ ಅಡಕವಾಗಿರಬಹುದು ಎಂಬ ಮಾತು ಇದೆ.

ದೇಶದಲ್ಲಿ ಲಕ್ಷಾಂತರ ರೈತ ಕುಟುಂಬಗಳಿಗೆ ಹೈನುಗಾರಿಕೆಯೇ ಜೀವನಾಧಾರವಾಗಿದೆ. ಈಗ ಹಾಲು ಹಾಗೂ ಕೋಳಿ ಉತ್ಪನ್ನಗಳ ಆಮದಿಗೆ ಮುಕ್ತವಾಗಿ ಬಾಗಿಲು ತೆರೆದಿಟ್ಟರೆ, ಅದನ್ನೇ ನಂಬಿಕೊಂಡಿರುವ ಎಷ್ಟೋ ರೈತ ಕುಟುಂಬಗಳು ಬೀದಿಪಾಲಾಗುವ ಅಪಾಯ ಇದೆ.

ಹೈನುಗಾರಿಕೆಯಲ್ಲಿ ಈಗಾಗಲೇ ನಾವು ಸ್ವಾವಲಂಬಿಯಾಗಿದ್ದೇವೆ. ಹೀಗಿರುವಾಗ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಸ್ತಾವ ಏಕೆ? ನಾವು ಯೋಚಿಸ ಬೇಕಿರುವುದು ರಫ್ತು ಹೆಚ್ಚಿಸುವುದರ ಕುರಿತು. ಆಗ ರೈತರ ಹಿತ ಕಾಪಾಡಿದಂತೆ ಆಗುತ್ತದೆ, ದೇಶದ ಆಥಿ೯ಕತೆಗೂ ಬಲ ಬರುತ್ತದೆ.

ADVERTISEMENT

-ಬಸವರಾಜ ಎಸ್.ಎನ್.,ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.