ಚಂದನ ಟಿ.ವಿ. ವಾಹಿನಿಯಲ್ಲಿ ಈಗ ಶಾಲಾ ಮಕ್ಕಳಿಗಾಗಿ ಪಾಠಗಳು ಬರುತ್ತಿವೆ. ನನ್ನ ಮಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಟಿ.ವಿ. ದೊಡ್ಡ ಗಾತ್ರದ್ದಾದರೂ ಪರದೆಯಲ್ಲಿ ಮೂಡಿಬರುವ ಅಕ್ಷರಗಳು ಹೆಚ್ಚಿನ ಬಾರಿ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿ ಇರುತ್ತವೆ. ಹೀಗಾಗಿ ಈ ಪಾಠಗಳನ್ನು ಸಂಪೂರ್ಣವಾಗಿ ತಿಳಿಯಲು ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ತರಗತಿ ಕೋಣೆಯ ಸನ್ನಿವೇಶ ಸೃಷ್ಟಿಸಲು ಹೋಗಿ ಈ ಯಡವಟ್ಟಾಗಿದೆ ಎಂಬುದು ತಿಳಿಯುತ್ತದೆ. ಟಿ.ವಿ. ಪರದೆಯಲ್ಲಿ ಒಂದು ಚಿಕ್ಕ ಬೋರ್ಡ್, ಪಕ್ಕದಲ್ಲಿ ಒಂದು ಕಪಾಟು ಹಾಗೂ ಮುಂದೆ ಶಿಕ್ಷಕರು ಎಲ್ಲವೂ ಕಾಣುವಂತೆ ಮಾಡಿದ್ದಾರೆ. ಆದರೆ ಬೋರ್ಡ್‌ಗಿಂತ ಕಪಾಟಿನ ಚಿತ್ರ ಮತ್ತು ಶಿಕ್ಷಕರ ಆಕೃತಿಯೇ ದೊಡ್ಡದಾಗಿ ಕಾಣಿಸುತ್ತವೆ.
ಇಲ್ಲಿ ಕಪಾಟು ಬೇಕಾಗಿಲ್ಲ, ಶಿಕ್ಷಕರು ‘ಚಂದನ ಲಾಂಛನ’ದ ಕೆಳಗೆ ನಿಂತುಕೊಂಡಂತೆ ಮಾಡಿ, ಬೋರ್ಡ್ ಪೂರ್ಣಪ್ರಮಾಣದಲ್ಲಿ ದೊಡ್ಡದಾಗಿ ಕಾಣುವಂತೆ ಮಾಡಿದರೆ, ಅದರಲ್ಲಿ ಮೂಡಿ ಬರುವ ಅಕ್ಷರಗಳು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ದೊಡ್ಡದಾಗಿ ಕಾಣುತ್ತವೆ. ಸಂಬಂಧಪಟ್ಟವರು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು.
– ಪ್ರಕಾಶ ವಿ. ಹೆಬ್ಬಳ್ಳಿ,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.