ADVERTISEMENT

ಮಾರ್ಷಲ್‌ಗಳ ನಿಯೋಜನೆ ತರವೇ?

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 19:31 IST
Last Updated 12 ಮಾರ್ಚ್ 2021, 19:31 IST

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ದಿನಬೆಳಗಾದರೆ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗುತ್ತಿವೆ. ಹೀಗಿದ್ದರೂ ಶಿವರಾತ್ರಿ ಹಬ್ಬದಂದು ಎಲ್ಲಾ ದೇವಾಲಯಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಸಾವಿರಾರು ಜನರ ಗುಂಪು, ಮತ್ತೆಲ್ಲೋ ಸಿನಿಮಾ ಬಿಡುಗಡೆಗೆ ಅಭಿಮಾನಿಗಳ ಸಂಭ್ರಮಾಚರಣೆ ನೋಡಿ ಆಶ್ಚರ್ಯ, ಆತಂಕ ಆಯಿತು. ಜೊತೆಗೆ ವಿಚಿತ್ರವೆನಿಸಿತು. ಏಕೆಂದರೆ, ಹೀಗೆ ಸಾವಿರಾರು ಜನ ಪರಸ್ಪರ ಅಂತರ, ಮಾಸ್ಕ್ ಯಾವುದೂ ಇಲ್ಲದೆ ಒಂದೆಡೆ ಸೇರುವುದು ಅಪರಾಧವಲ್ಲ ಎಂದಾದರೆ, ಒಂದೇ ಕುಟುಂಬದ ಇಬ್ಬರು ಕಾರಿನೊಳಗೆ ಇದ್ದು, ಎಲ್ಲಾ ಕಿಟಕಿ ಗಾಜುಗಳನ್ನು ಮುಚ್ಚಿದ್ದರೂ ಮಾಸ್ಕ್ ಹಾಕದಿದ್ದರೆ ದಂಡ ಹಾಕುವುದರಲ್ಲಿ ಏನಾದರೂ ಅರ್ಥವಿದೆಯೇ? ಸಿಗ್ನಲ್‌ ಗಳಲ್ಲಿ ದಂಡ ವಸೂಲಿಗಾಗಿಯೇ ಕಾಯುತ್ತಿರುವಂತೆ ತೋರುವ ಮಾರ್ಷಲ್‌ಗಳ ನಿಯೋಜನೆ ಎಷ್ಟು ಸಮಂಜಸ?

-ಅರ್ಚನಾ ಶಂಕರ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT