ADVERTISEMENT

ವಯಸ್ಸು ನಗಣ್ಯ, ಅರಿವು ಮುಖ್ಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 20:00 IST
Last Updated 27 ಆಗಸ್ಟ್ 2019, 20:00 IST

ಕಾನೂನುಬದ್ಧವಾಗಿ ಮದುವೆ ಆಗಲು ಹೆಣ್ಣು ಮತ್ತು ಗಂಡಿಗೆ ಒಂದೇ ವಯಸ್ಸು ಇರಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡಿರುವ ದೆಹಲಿ ಹೈಕೋರ್ಟ್‌, ಈ ಸಂಬಂಧ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ (ಪ್ರ.ವಾ., ಆ. 20). ಹೆಣ್ಣು–ಗಂಡಿನ ಮದುವೆ ವಯಸ್ಸಿನಲ್ಲಿ ತಾರತಮ್ಯವಿದ್ದರೆ ದಾಂಪತ್ಯ ಬದುಕಿನಲ್ಲಿ ಪ್ರೀತಿ–ಗೌರವ ದುರ್ಬಲಗೊಳ್ಳುತ್ತವೆ ಎಂಬುದರಲ್ಲಾಗಲಿ, ಸಮಾನ ವಯಸ್ಕರಲ್ಲಿ ಪ್ರೀತಿ–ಗೌರವ ಸ್ಥಿರವಾಗಿರುತ್ತವೆ ಎಂಬುದರಲ್ಲಾಗಲಿ ನನಗೆ ವಿಶ್ವಾಸವಿಲ್ಲ. ಹೆಣ್ಣು–ಗಂಡಿನ ಸಾಮರಸ್ಯದ ಬದುಕಿಗೆ ಅಂಕಿ ಅಂಶಗಳ ಲೆಕ್ಕಾಚಾರ ನಗಣ್ಯ. ದಾಂಪತ್ಯದ ಆಶೋತ್ತರ ಅರ್ಥಸಿಕೊಳ್ಳುವ ಜ್ಞಾನ ಮೊಳೆತು, ಪರಸ್ಪರರು ಅಭಿರುಚಿ ಅರಿತು ಸಹಕರಿಸುವುದರೊಂದಿಗೆ ಉಭಯತ್ರರಲ್ಲೂ ಸಹಜವಾಗಿಯೇ ಪ್ರೀತಿ–ಭಾವಗಳು ಬೆಸೆದುಕೊಳ್ಳುತ್ತವೆ.

‘ಸಮಾನತೆ’ ಎಂಬ ಹೊರಗಿನ ರಾಜಕೀಯ ಕೂಗನ್ನು ನಮ್ಮ ಬದುಕಿನೊಳಗೆ ಅಳವಡಿಸಿಕೊಂಡಿದ್ದೇ ಆದರೆ, ನಮ್ಮ ಬದುಕು ನಾವು ದಿನನಿತ್ಯ ಕಾಣುವ ರಾಜಕೀಯ ರಗಳೆಗಳ ರಣರಂಗವೇ ಆಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಹೆಣ್ಣಿನ ಕನಿಷ್ಠ ವಯಸ್ಸನ್ನು ‘ತಾರತಮ್ಯ’ ಎನ್ನುವುದರಲ್ಲಿ, ಪಿತೃಪ್ರಧಾನ ವ್ಯವಸ್ಥೆಯ ಮುಂದುವರಿಕೆ ಎಂಬುದರಲ್ಲಾಗಲಿ ಹುರುಳಿಲ್ಲ. ಮದುವೆಯಾಗಲು ಹೆಣ್ಣಿಗೆ 18, ಗಂಡಿಗೆ 21 ಆಗಿರಬೇಕು ಎಂಬ ಈಗಿನ ನಿಗದಿತ ಕಾನೂನುಬದ್ಧ ವಯಸ್ಸು ಅರ್ಥಗರ್ಭಿತವಾಗಿಯೇ ಇದೆ. ಆದಾಗ್ಯೂ ವಯಸ್ಸಿನ ತಾರತಮ್ಯವು ಸುಖೀ ದಾಂಪತ್ಯಕ್ಕೆ ಮೂಲಾಧಾರವಾಗದು.

-ಬಿ.ಲಕ್ಕಣ್ಣ,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.