ADVERTISEMENT

ಆಂಧ್ರ: ‘ದಿಶಾ ಮಸೂದೆ’ ಶ್ಲಾಘನೀಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:30 IST
Last Updated 13 ಡಿಸೆಂಬರ್ 2019, 20:30 IST

ಹೈದರಾಬಾದ್‌ನಲ್ಲಿ ಪಶುವೈದ್ಯೆಯೊಬ್ಬರ ಮೇಲೆ ನಡೆದ ಘೋರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮಾನವ ಕುಲಕ್ಕೆ ಕಳಂಕ ತರುವಂತಹದ್ದು. ಈ ಘಟನೆಯ ಬೆನ್ನಲ್ಲೇ, ಅತ್ಯಾಚಾರಿಗೆ 21 ದಿನದಲ್ಲಿ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವ ‘ದಿಶಾ ಮಸೂದೆ’ಯನ್ನು ಜಾರಿಗೆ ತರಲು ಆಂಧ್ರ ಪ್ರದೇಶ ಸರ್ಕಾರ ಮುಂದಾಗಿರುವುದು ಅತ್ಯಾಚಾರಿಗಳ ಮೇಲೆ ಬ್ರಹ್ಮಾಸ್ತ್ರದಂತೆ ಪರಿಣಾಮ ಬೀರುವ ನಿರೀಕ್ಷೆ ಇದೆ.

ಅತ್ಯಾಚಾರಿಗಳಿಗೆ ಈ ಕಾನೂನಿನಡಿ ಗಲ್ಲುಶಿಕ್ಷೆ ಕಟ್ಟಿಟ್ಟ ಬುತ್ತಿ. ಜೊತೆಗೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರ ಸಹ ಶ್ಲಾಘನೀಯ. ಈ ರೀತಿಯ ಕಾನೂನನ್ನು ದೇಶದ ಎಲ್ಲ ರಾಜ್ಯಗಳೂ ಜಾರಿಗೆ ತರಬೇಕಿದೆ. ಇದರಿಂದ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಮತ್ತು ನೊಂದ ಕುಟುಂಬಕ್ಕೆ ನ್ಯಾಯ ತ್ವರಿತವಾಗಿ ಸಿಗುವ ಅವಕಾಶ ಇದೆ.

ರಾಹುಲ್‌ ಸಿಂಹ ಎನ್‌.,ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.