ADVERTISEMENT

ನಿಷೇಧಿತ ನೋಟುಗಳು ಹುಂಡಿಗೇಕೆ?

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 19:45 IST
Last Updated 17 ಜನವರಿ 2019, 19:45 IST

ಕೆಲವು ದೇವಾಲಯಗಳ ಹುಂಡಿಗಳಲ್ಲಿ ನಿಷೇಧಿತ ನೋಟುಗಳ ಬೃಹತ್ ಪ್ರಮಾಣದ ಕಟ್ಟುಗಳು ಇತ್ತೀಚೆಗೆ ಪತ್ತೆಯಾಗಿವೆ. ಇವುಗಳಿಂದ ದೇವಸ್ಥಾನದವರಿಗೂ ಉಪಯೋಗವಿಲ್ಲ, ದೇವರಿಗೆ ಸಮರ್ಪಿಸಿದ ಹಾಗೂ ಆಗುವುದಿಲ್ಲ. ಈ ಹಣವನ್ನು ಏನು ಮಾಡುವುದೆಂದು ತಿಳಿಯದೆ ದೇವಸ್ಥಾನದವರು ಚಡಪಡಿಸುವಂತಾಗಿದೆ. ಕಪ್ಪು ಹಣವನ್ನು ಇಟ್ಟುಕೊಂಡಿದ್ದಕ್ಕೆ ಪಾಪ ಪರಿಹಾರಾರ್ಥವಾಗಿ ದೇವರ ಹುಂಡಿಗೆ ಹಾಕಿ ಶಿಕ್ಷೆ ಅಥವಾ ದಂಡದಿಂದ ತಪ್ಪಿಸಿಕೊಳ್ಳುವ ತಂತ್ರ ಇದೆಂದು ಕಾಣುತ್ತದೆ.

ಇದನ್ನು ಗಮನಿಸಿದರೆ, ಅಕ್ರಮವಾಗಿ ಸಂಪಾದಿಸಿದ ಹಣ ಇನ್ನೂ ಬಹಳಷ್ಟು ಜನರಲ್ಲಿ ಇದೆ ಎಂಬುದು ತಿಳಿಯುತ್ತದೆ. ಹಾಗಿದ್ದರೆ, ದಂಡನೆಯಿಂದ ತಪ್ಪಿಸಿಕೊಳ್ಳಲು ಹುಂಡಿಯ ಮೊರೆ ಹೋಗುವವರ ವಿರುದ್ಧ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ?

-ಪಿ. ಜಯವಂತ ಪೈ,ಕುಂದಾಪುರ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.