ಡ್ರಗ್ಸ್ ವಿಚಾರವು ಒಂದು ವಾರದಿಂದಲೂ ಮನರಂಜನೆಯ ರೂಪ ಪಡೆದಿದೆ. ‘ನಾನು ಸೆಲೆಬ್ರಿಟಿ ಆಗಿದ್ದು ತಪ್ಪೇ’ ಎಂದು ನಿಸ್ಸಹಾಯಕತೆಯಿಂದ ಅಳುವ ಹೆಣ್ಣುಮಗಳ ಪ್ರಶ್ನೆಗೆ ಯಾರೂ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಈ ಆರೋಪ ಸಾಬೀತಾದರೆ ಈ ಮಹಿಳೆಯರಿಗೆ ಎಷ್ಟು ಶಿಕ್ಷೆ ದೊರೆಯಬಹುದೋ ಅದರ ಹತ್ತರಷ್ಟು ಮಾನಸಿಕ ಕಿರುಕುಳವನ್ನು ನಮ್ಮ ಮಾಧ್ಯಮಗಳು ಈಗಾಗಲೇ ಕೊಟ್ಟಿವೆ. ಈ ಕಲಾವಿದರ ನೃತ್ಯಭಂಗಿಗಳನ್ನು ಬಳಸಿಕೊಳ್ಳುತ್ತಲೇ ಅವರನ್ನು ‘ನೌಟಂಕಿ’, ‘ನಶಾರಾಣಿ’, ‘ಮಾದಕ ಬೆಡಗಿ’ ಎಂದೆಲ್ಲ ಲೇವಡಿ ಮಾಡುತ್ತಾ ಹೀಯಾಳಿಸುವುದರ ಹಿಂದೆ ಯಾವ ಪುರುಷಾರ್ಥ ಕೆಲಸ ಮಾಡುತ್ತಿದೆ?
ಕೇವಲ ಮನರಂಜನೆಗಾಗಿ ಇಂತಹ ಅಮಾನವೀಯ ಅಭಿರುಚಿಯನ್ನೇ ಬಿತ್ತಿ ಬೆಳೆದು ನಾವು ಎಂತಹ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿದ್ದೇವೆ? ಇದು, ಹೆಣ್ಣುಮಕ್ಕಳ ಮೇಲಷ್ಟೇ ಎರಗುತ್ತಿರುವ ಕ್ರೌರ್ಯವಲ್ಲ, ನಮ್ಮ ನಡುವಿನ ಮನುಷ್ಯತ್ವದ ಪ್ರಶ್ನೆ ಇದು. ಇದರಿಂದ ಹೆಂಗಸರಿಗಷ್ಟೇ ದುಃಖವಾಗುವುದಿಲ್ಲ. ಹೃದಯವಿರುವ ಗಂಡಸರೂ ದುಃಖ ಪಡುತ್ತಾರೆ.
– ಜಿ.ಎಸ್.ಜಯದೇವ,ಚಾಮರಾಜನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.