ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್ ಪಡೆದರೂ ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ₹ 58 ಸಾವಿರದಿಂದ ₹ 60 ಸಾವಿರ! ಜೊತೆಗೆ ಕಾಲೇಜು ಶುಲ್ಕ ₹ 30 ಸಾವಿರ, ಹಾಸ್ಟೆಲ್ ಶುಲ್ಕ ₹ 80 ಸಾವಿರದಿಂದ ₹ 1 ಲಕ್ಷ! ಇದು ವರ್ಷದ ಶುಲ್ಕ.
ಇಂದು ಕರ್ನಾಟಕದ ಒಬ್ಬ ವಿದ್ಯಾರ್ಥಿ ಎಂಜಿನಿಯರಿಂಗ್ ಪದವಿ ಪಡೆಯಲು ವರ್ಷಕ್ಕೆ ಕನಿಷ್ಠ ₹ 2 ಲಕ್ಷ ವ್ಯಯಿಸಬೇಕು. ನಾಲ್ಕು ವರ್ಷಕ್ಕೆ ಲೆಕ್ಕಹಾಕಿ. ಈ ಕ್ರಮ, ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳನ್ನು ತಾಂತ್ರಿಕ ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಕನಿಷ್ಠ ಆ ಕುರಿತು ಯೋಚಿಸಲು ಸಹ ಆ ಮಕ್ಕಳಿಗೆ ಸಾಧ್ಯವಾಗುವುದಿಲ್ಲ.
ಇನ್ನು ವೈದ್ಯಕೀಯ ಶಿಕ್ಷಣದ ಪ್ರವೇಶವಂತೂ ಆ ವರ್ಗಗಳ ಪಾಲಿಗೆ ಅಸಾಧ್ಯ ಎಂಬಂತಾಗಿದೆ. ಸ್ಪರ್ಧೆಯ ಭಾಗವಾಗುವ ಅವಕಾಶವನ್ನೇ ಮುಚ್ಚಿಬಿಡುವ ಈ ಶಿಕ್ಷಣ ವ್ಯಾಪಾರವು ಅಸಮಾನತೆಗಿಂತಲೂ ಘೋರ ಅನ್ಯಾಯ. ಮೇಲ್ಮಧ್ಯಮ ವರ್ಗ, ಸರ್ಕಾರಿ ನೌಕರರ ಮಕ್ಕಳು, ಸಿರಿವಂತರ ಮಕ್ಕಳು ಮಾತ್ರ ಪಡೆಯಲು ಸಾಧ್ಯವಾಗುವ ಸವಲತ್ತನ್ನು ಸಾರ್ವತ್ರಿಕ ಶಿಕ್ಷಣ ಎಂದು ಹೇಗೆ ಕರೆಯಲು ಸಾಧ್ಯ?
– ಕಿರಣ್ ಗಾಜನೂರು,ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.