ADVERTISEMENT

ವಾಚಕರ ವಾಣಿ | ಶೈಕ್ಷಣಿಕ ಪ್ರವಾಸ: ಅವಧಿ ವಿಸ್ತರಿಸಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 19:31 IST
Last Updated 16 ಡಿಸೆಂಬರ್ 2022, 19:31 IST

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಇದೇ 31ರೊಳಗೆ ಮುಗಿಸುವಂತೆ ಸೂಚಿಸಲಾಗಿದೆ. ಶೈಕ್ಷಣಿಕ ಮತ್ತು ಪರೀಕ್ಷಾ ದೃಷ್ಟಿಯಿಂದ ಇದು ಸರಿಯಾದ ನಿಯಮ ಹೌದು. ಆದರೆ ಇದರಿಂದ ಒಟ್ಟಾರೆಯಾಗಿ ಪ್ರವಾಸಿ ಸ್ಥಳಗಳಲ್ಲಿ ವಿಪರೀತ ಜನಸಂದಣಿ ಉಂಟಾಗಿ, ಮಕ್ಕಳು ಇನ್ನಿಲ್ಲದ ಪರಿತಾಪವನ್ನು ಅನುಭವಿಸಬೇಕಾಗುತ್ತದೆ. ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಾದ ಮೈಸೂರಿನ ಬೃಂದಾವನ, ಹಂಪಿ, ವಿಜಯಪುರ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಧರ್ಮಸ್ಥಳ, ಉಡುಪಿ, ಕೊಲ್ಲೂರು ಹೀಗೆ ಪ್ರತಿಯೊಂದು ಸ್ಥಳದಲ್ಲೂ ಜನಸಂದಣಿ ಹೆಚ್ಚಾಗಿ, ಮಕ್ಕಳಿಗೆ ಪ್ರವಾಸಿ ಸ್ಥಳಗಳ ದರ್ಶನ ಮಾಡಿಸುವುದು ಶಿಕ್ಷಕರಿಗೆ ದೊಡ್ಡ ಹೊರೆಯಾಗುತ್ತದೆ.

ಹೀಗಾಗಿ, ಶಿಕ್ಷಣ ಇಲಾಖೆಯು ಶೈಕ್ಷಣಿಕ ಪ್ರವಾಸದ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಬೇಕು. ಅಲ್ಲದೆ, ಶೈಕ್ಷಣಿಕ ಪ್ರವಾಸವನ್ನು ದಿನಾಂಕದ ಇತಿಮಿತಿಗೆ ಒಳಪಡಿಸುವುದು ಅವೈಜ್ಞಾನಿಕವಾದ ಕ್ರಮವಾಗುತ್ತದೆ.

ಸರೋಜಿನಿ ನಾಯಕ್,ಆಶಿಹಾಳ ತಾಂಡ

ADVERTISEMENT

ಆಸೆ ಮರೆತರೆ ಲೇಸು!

ಗುಣಮಟ್ಟದ ರಸ್ತೆ

ತೋರಿಸಿದರೆ ಬಹುಮಾನವಂತೆ
ಬಿಬಿಎಂಪಿಗೆ ರವಿಂದ್ರನಾಥ್

ಸವಾಲು ಹಾಕಿದ್ದಾರಂತೆ
ಅಂತಹ ರಸ್ತೆಗಳು

ಸಿಗಬಹುದೇ ಬೆಂಗಳೂರಿನಲ್ಲಿ?
ಬಹುಮಾನದ ಆಸೆ

ಮರೆತು ಕುಳಿತುಬಿಡಿ ಕೈಚೆಲ್ಲಿ.

- ಕುಮಾರ ಚಲವಾದಿ,ಹಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.