ADVERTISEMENT

ವಾಚಕರ ವಾಣಿ: ಸುರಕ್ಷತೆ ಆಡಿಟ್ ಕಡ್ಡಾಯವಾಗಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಮೇ 2022, 19:45 IST
Last Updated 16 ಮೇ 2022, 19:45 IST

ಸಾರ್ವಜನಿಕ ಸ್ಥಳಗಳು ಸುರಕ್ಷತೆಗೆ ಯೋಗ್ಯವಲ್ಲ ಎನ್ನುವುದಕ್ಕೆ ಬೆಂಗಳೂರಿನ ಬಸ್ ನಿಲ್ದಾಣದಲ್ಲಿದ್ದ ಜಾಹೀರಾತು ಫಲಕದ ತಂತಿಯ ಮೂಲಕ ವಿದ್ಯುತ್ ಪ್ರವಹಿಸಿ, 28 ವರ್ಷದ ಯುವಕ ಮೃತಪಟ್ಟಿರುವುದು (ಪ್ರ.ವಾ., ಮೇ 16) ನಿದರ್ಶನವಾಗಿದೆ. ಮತ್ತೊಂದು ಮಗದೊಂದು ವಿದ್ಯುತ್ ಅವಘಡ ಸಂಭವಿಸುತ್ತಲೇ ಇವೆ. ಅಷ್ಟಕ್ಕೂ ಬಸ್ ನಿಲ್ದಾಣ ದಲ್ಲಿದ್ದ ಅಕ್ರಮ ಸಂಪರ್ಕ ಬೆಸ್ಕಾಂ ಸಿಬ್ಬಂದಿಗೆ ಕಾಣಿಸಲಿಲ್ಲವೇ? ಜಾಹೀರಾತು ಕಂಪನಿಯು ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು ಒಪ್ಪುವಂಥದ್ದಲ್ಲ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ‘ಸುರಕ್ಷತೆ ಬಗ್ಗೆ ಆಡಿಟ್’ ನಡೆಸಲು ಬೆಸ್ಕಾಂ ಮುಂದಾಗಿದ್ದರೆ ಇಂಥ ಅಕ್ರಮಗಳನ್ನು ಮುಂಚಿತವಾಗಿಯೇ ಪತ್ತೆ ಹಚ್ಚಿ ಸರಿಪಡಿಸಬಹುದಿತ್ತಲ್ಲವೇ?

ಸುರಕ್ಷತೆ ಬಗ್ಗೆ ಜನರು ಸಂಬಂಧಪಟ್ಟವರಿಗೆ ಮನವಿ ಮಾಡಿಕೊಳ್ಳುವುದು ಅಥವಾ ಮಾಧ್ಯಮಗಳ ಮೂಲ ಪ್ರಕಟ ಮಾಡಿದ ನಂತರವಷ್ಟೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದು ಯಾವ ನ್ಯಾಯ?

-ಡಾ. ಜಿ.ಬೈರೇಗೌಡ, ಬೆಂಗಳೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.