ದೃಶ್ಯ ಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರುವ ಹಸಿಬಿಸಿ ಲೈಂಗಿಕ ಪ್ರಚೋದನಕಾರಿ ದೃಶ್ಯಗಳು, ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳು ಕುಟುಂಬದವರು ಒಟ್ಟಾಗಿ ಕುಳಿತು ನೋಡುವಾಗ ಮುಜುಗರ ಉಂಟು ಮಾಡುವಂತಿವೆ.
ಇದು, ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವು ದೃಶ್ಯ ಮಾಧ್ಯಮಗಳಿಗೆ ಸಾಮಾಜಿಕ ಕಾಳಜಿಯೇ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ.
ಕೆಲವು ಸುದ್ದಿವಾಹಿನಿಗಳು ಟಿಆರ್‌ಪಿಯ ಜಿದ್ದಾಜಿದ್ದಿಗೆ ಬಿದ್ದು ವಿವೇಚನಾರಹಿತವಾಗಿ ವರದಿ ಮಾಡುತ್ತಿರುವುದು ಆತಂಕಕಾರಿಯಾಗಿದೆ. ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವೆಲ್ಲವನ್ನೂ ಬಿಟ್ಟು ದಿನದ ಇಪ್ಪತ್ತನಾಲ್ಕು ಗಂಟೆಯೂ ಇಂತಹ ಕೆಲಸಕ್ಕೆ ಬಾರದ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇವುಗಳನ್ನು ನೋಡಿದ ಚಿಕ್ಕ ಮಕ್ಕಳು ಏನಾದರೂ ಆ ಬಗ್ಗೆ ಕೇಳಿದರೆ ನಾವು ಉತ್ತರಿಸಲಾರದ ಸ್ಥಿತಿಯಲ್ಲಿದ್ದೇವೆ. ಇಂತಹ ಸುದ್ದಿ–ದೃಶ್ಯಗಳನ್ನು ಪ್ರಸಾರ ಮಾಡಿ ಸಾಮಾಜಿಕ ಸ್ವಾಸ್ಥ್ಯ ಹಾಳುಗೆಡಹುವುದು ಬೇಡ.
ಸುರೇಶ ಗೌರೆ, ನವನಿಹಾಳ, ಕಲಬುರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.