ಚುನಾವಣೆಪೂರ್ವ ಪ್ರಣಾಳಿಕೆಯಲ್ಲಿ ಅಂಗವಿಕಲರಿಗಾಗಿ ಘೋಷಣೆ ಮಾಡಿದ ಆಶ್ವಾಸನೆಗಳನ್ನು ರಾಜ್ಯದ ಈಗಿನ ಸರ್ಕಾರ ತನ್ನ ಎರಡನೇ ಬಜೆಟ್‌ನಲ್ಲಿಯೂ ಸಂಪೂರ್ಣವಾಗಿ ಕಡೆಗಣಿಸಿರುವುದು ಸರ್ಕಾರಕ್ಕೆ ಅಂಗವಿಕಲರ ಮೇಲಿರುವ ಅಸಡ್ಡೆಯನ್ನು ತೋರಿಸುತ್ತದೆ. ಆರ್ಥಿಕ ಸಂಕಷ್ಟದಲ್ಲೂ ಜಾತಿಗೊಂದು ನಿಗಮ ಸ್ಥಾಪನೆಗೆ ಕೋಟ್ಯಂತರ ಹಣ ಮೀಸಲಿಡುವ ಸರ್ಕಾರ, ಅಂಗವಿಕಲರ ಸಬಲೀಕರಣ ಮತ್ತು ಸಾಮಾಜಿಕ ಭದ್ರತೆಗೆ ಒತ್ತು ನೀಡದಿರುವ ಔಚಿತ್ಯವಾದರೂ ಏನು? ಅಂಗವಿಕಲರಿಗೆ ಸಮಾನ ಅವಕಾಶಗಳ ಬಗ್ಗೆ ಶಾಸನ ರಚಿಸಿ ನೀತಿಪಾಠ ಮಾಡುವ ಸರ್ಕಾರ, ಆ ನೀತಿಯನ್ನೇ ಮರೆತಿರುವುದು ಸರಿಯೇ?
–ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.