ರಾಜ್ಯದ ಹೋರಾಟಗಾರ ರಾಜಕಾರಣಿಗಳಲ್ಲಿ ಒಬ್ಬರಾದ ಬಂಗಾರಪ್ಪನವರು ರಾಷ್ಟ್ರ ಮಟ್ಟದಲ್ಲಿ ಪ್ರಭಾವಿಯಾಗದೇ ಇರಲು ಇಂಗ್ಲಿಷ್ ಮತ್ತು ಹಿಂದಿ ಭಾಷಾ ಜ್ಞಾನದ ಕೊರತೆ ಕಾರಣ ಎಂಬ ಶಾಸಕ ಹರತಾಳು ಹಾಲಪ್ಪ ಅವರ ಹೇಳಿಕೆ ಸರಿಯಲ್ಲ.
ಸಂಸತ್ತಿನಲ್ಲಿ ಬಂಗಾರಪ್ಪನವರ ಭಾಷಣವನ್ನು ಕೇಳಿದ್ದವರಿಗೆ, ಇಂಗ್ಲಿಷ್ ಭಾಷೆಯ ಜ್ಞಾನ ಅವರಿಗೆ ಇರಲಿಲ್ಲ ಎನ್ನುವುದನ್ನು ನಂಬುವುದು ಕಷ್ಟ. ಬಂಗಾರಪ್ಪನವರು ಸಂಸದರಾಗಿ ಆಯ್ಕೆಯಾಗಿದ್ದಾಗಲೆಲ್ಲಾ ಅವರು ಪ್ರತಿನಿಧಿಸಿದ ಪಕ್ಷವು ವಿರೋಧ ಪಕ್ಷವಾಗಿದ್ದುದೇ ರಾಷ್ಟ್ರ ಮಟ್ಟದಲ್ಲಿ ಅವರು ಪ್ರಭಾವಿಯಾಗದೇ ಇದ್ದುದಕ್ಕೆ ಕಾರಣ.
-ಡಾ. ಶ್ರೀಧರ ನಾಯ್ಕ,ಕೂಜಳ್ಳಿ, ಕುಮಟಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.