ಕೇಂದ್ರ ಸರ್ಕಾರವು ಉಜ್ವಲಾ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದ ಫಲಾನುಭವಿಗಳಿಗೆ ₹ 200 ಸಬ್ಸಿಡಿ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಈ ಸೌಲಭ್ಯವನ್ನು ಎಲ್ಲರಿಗೂ ನೀಡಿದ್ದರೆ, ಬೆಲೆ ಏರಿಕೆಯ ಬಿಸಿಯಿಂದ ನಲುಗುತ್ತಿರುವ ಜನಸಾಮಾನ್ಯರಿಗೆ ಒಂದಷ್ಟು ನೆಮ್ಮದಿ ಸಿಗುತ್ತಿತ್ತು.
ಹಲವಾರು ವರ್ಷಗಳಿಂದ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಏಕಾಏಕಿ ನಿಲ್ಲಿಸಲಾಗಿದೆ. ಸಿಬ್ಸಿಡಿ ನೀಡುವುದರಲ್ಲಿ ಈಗ ತಾರತಮ್ಯ ಮಾಡುತ್ತಿರುವುದು ವಿಷಾದನೀಯ. ಸರ್ಕಾರ ಈ ನಿರ್ಧಾರವನ್ನು ಪುನರ್‌ಪರಿಶೀಲಿಸಿ, ಸಬ್ಸಿಡಿ ಸೌಲಭ್ಯವನ್ನು ಈ ಹಿಂದಿನಂತೆ ಎಲ್ಲರಿಗೂ ಮುಂದುವರಿಸಬೇಕು.
- ಭಾಸ್ಕರ್ ಶೆಟ್ಟಿ, ಹಾಸನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.