ಲೋಕಸಭಾ ಚುನಾವಣೆಯ ಶೇಕಡ 50ರಷ್ಟು ವಿವಿಪ್ಯಾಟ್‌ಗಳನ್ನು ಮತಯಂತ್ರಗಳ ಜೊತೆ ತಾಳೆ ಮಾಡಬೇಕೆಂದು ಕೋರ್ಟನ್ನು ಕೋರಲಾಗಿತ್ತು. ಆದರೆ ಕೋರ್ಟ್ ಒಪ್ಪದೆ ಶೇ 2ರಷ್ಟನ್ನು ಮಾತ್ರ ತಾಳೆ ಮಾಡಲು ಅನುಮತಿಸಿದೆ. ಇದರಿಂದ ಫಲಿತಾಂಶ ಪ್ರಕಟಣೆ 4 ತಾಸುಗಳಷ್ಟು ವಿಳಂಬವಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಅದೇ ಶೇ 50ರಷ್ಟು ವಿವಿಪ್ಯಾಟ್‌ಗಳನ್ನು ತಾಳೆ ಮಾಡಲು ಹೊರಟರೆ 300 ತಾಸುಗಳಷ್ಟು (ಸುಮಾರು 12 ದಿನ) ಫಲಿತಾಂಶ ವಿಳಂಬವಾಗುತ್ತದೆ. ಇದರಿಂದ ಚುನಾವಣಾ ಅಧಿಕಾರಿಗಳ ಮಾನಸಿಕತೆ, ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳು ಏನಾಗಬೇಡ?
ಇಂಡೊನೇಷ್ಯಾದಲ್ಲಿ ಇತ್ತೀಚೆಗೆ ಲಕ್ಷಾಂತರ ಮತಪತ್ರಗಳನ್ನು ಎಣಿಸಲು ದೀರ್ಘಾವಧಿ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ 270 ಸಿಬ್ಬಂದಿ ಸಾವಿಗೀಡಾದರು. ಅಮೆರಿಕದಂಥ ದೇಶವೇ ಫಲಿತಾಂಶ ವಿಳಂಬವಾಗುತ್ತದೆ ಎಂಬ ಕಾರಣದಿಂದ ಶೇಕಡ 10ರಷ್ಟು ಮತಗಳನ್ನು ಮಾತ್ರ ತಾಳೆ ಮಾಡುತ್ತದೆ. ಇನ್ನು ಶೇ 50ರಷ್ಟು ತಾಳೆ ಮಾಡುವುದೆಂದರೆ, ನಮ್ಮಂಥ ದೇಶಕ್ಕೆ ಹೆಚ್ಚಿನ ಹೊರೆಯೇ ಸರಿ. ಹೀಗಾಗಿ ಈ ಯೋಚನೆ ಕೈಬಿಟ್ಟು, ವಿವಿಪ್ಯಾಟ್ ಮತ್ತು ಇವಿಎಂಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಕುರಿತು ವಿಚಾರ ಮಾಡುವುದು ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.