‘ತಿಳಿವಳಿಕೆಯೇ ಪತನ’ ಎನ್ನುವಂತೆ ವಿಜ್ಞಾನವು ಹೆಣ್ಣನ್ನು ಇಂದು ಭ್ರೂಣಾವಸ್ಥೆಯಲ್ಲಿಯೇ ಕೊಲ್ಲುವತ್ತ ಬಂದು ನಿಂತಿದೆ. ಒಮ್ಮೊಮ್ಮೆ ಬೆಲ್ಲ ತಿನ್ನುವುದು ರೂಢಿ. ಮೊನ್ನೆ ಬೆಲ್ಲವನ್ನು ನೋಡಿದಾಗ ನಿಜಕ್ಕೂ ಭಯವಾಯಿತು. ನನ್ನ ಸುತ್ತ ನಗುನಗುತ್ತಾ ಓಡಾಡುತ್ತಿದ್ದ ತಂಗಿ, ಅಕ್ಕ, ಅಮ್ಮನ ಕಂಡು ಕಣ್ಣೀರು ತುಂಬಿ ಬಂತು. ಹೆಣ್ಣುಮಗುವನ್ನು ಕೊಲ್ಲಲು ವಿಷ ಬೆರೆಸಿದ ಬೆಲ್ಲ ತಿನ್ನಿಸುತ್ತಿದ್ದರು, ಆಸ್ಪತ್ರೆಗಳಲ್ಲಿ ಭ್ರೂಣಗಳನ್ನು ತಿನ್ನಲು ನಾಯಿಗಳನ್ನು ಸಾಕಿದ್ದರು, ಹಲವಾರು ವೈದ್ಯರು, ಮಧ್ಯವರ್ತಿಗಳು ಭ್ರೂಣ ಹತ್ಯೆಯನ್ನು ದಂಧೆ ಮಾಡಿಕೊಂಡಿದ್ದರು ಎಂಬ ವರದಿ (ಪ್ರ.ವಾ., ಒಳನೋಟ, ಜುಲೈ 14) ದಂಗುಬಡಿಸಿತು.
ಈ ಸಂಬಂಧದ ಕಾನೂನುಗಳು ಇನ್ನೂ ಕಠಿಣವಾಗಲಿ. ಮುಖ್ಯವಾಗಿ ಜನರ ಮನಃಸ್ಥಿತಿ ಬದಲಾಗಲಿ. ಇಂದಿಗೂ ಹೆಣ್ಣು ಜನ್ಮವನ್ನು ಒಂದು ತೊಂದರೆ ಎನ್ನುವಂತೆ ಮಾಡುತ್ತಿರುವ ವರದಕ್ಷಿಣೆ, ತಾರತಮ್ಯ, ದೌರ್ಜನ್ಯದಂತಹ ಆಚರಣೆಗಳು ವಿದ್ಯಾವಂತರು ಎನಿಸಿದ ನಮ್ಮಲ್ಲಿನ್ನೂ ಇರುವುದು ಕ್ರೂರ ಸಂಗತಿ. ಅದರ ಆಚರಣೆ ಮಾಡುವವರಿಗೆ ಇದು ನಾಚಿಕೆಯಾಗಬೇಕಾದ ಸಂಗತಿ.
-ಧನಂಜಯ ಎನ್.ಆರ್.,ತೋವಿನಕೆರೆ, ತುಮಕೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.