ಈ ತಿಂಗಳ 15ರಂದು ಫಿಫಾ ಫುಟ್ಬಾಲ್ ವಿಶ್ವಕಪ್ ಯಾರು ಬೇಕಾದರೂ ಗೆಲ್ಲಲಿ. ಆದರೆ ವಿಶ್ವದಾದ್ಯಂತ ಈಗಾಗಲೇ ಗಮನ ಸೆಳೆದ ಥಾಯ್ಲೆಂಡ್‌ನ 12 ಮಂದಿ ಬಾಲಕರ ಫುಟ್ಬಾಲ್ ಟೀಮ್ ಹಾಗೂ ಅವರ ತರಬೇತುದಾರನ ಸಾಹಸಮಯ ರಕ್ಷಣೆ ಜಗತ್ತಿನ ಎಲ್ಲರ ಪ್ರಶಂಸೆಯನ್ನು ಗಳಿಸಿದೆ.
ಅವರ ಧೈರ್ಯ, ಸ್ಥೈರ್ಯ, ಕ್ಷಮತೆ, ರಕ್ಷಣಾ ಪಡೆಯ ಸಾಹಸ, ಅಂತಿಮದಲ್ಲಿ ಅವರ ಜೀವಂತ ರಕ್ಷಣೆ ಬೆರಗಾಗಿಸಿದೆ. ಪೂರ್ಣ ಬೆಳೆ ನಾಶವಾದರೂ ಪರವಾಗಿಲ್ಲ, ಮಕ್ಕಳು ಉಳಿದರೆ ಸಾಕು ಎಂದು ಪ್ರವಾಹದ ನೀರನ್ನು ತಮ್ಮ ಗದ್ದೆಗೆ ಹರಿಯಬಿಟ್ಟ ಆ ರೈತರ ಔದಾರ್ಯಕ್ಕೆ ಮಿಗಿಲೇ ಇಲ್ಲ. ರಕ್ಷಣಾ ಪಡೆಯ ಸೇವೆಗೆಂದು ಸ್ಥಳೀಯರ ಉಪಚಾರ, ತ್ಯಾಗ ನಿಜಕ್ಕೂ ಪ್ರಶಂಸನೀಯ.
ವಿ.ವಿಜಯೇಂದ್ರ ರಾವ್, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.