ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿರುವ, ಬಿಜ್ಜಳ ರಾಜನು ರಾಜ್ಯಭಾರ ಮಾಡಿದ ಕೋಟೆ ಕೊತ್ತಲಗಳನ್ನು ನಾನು ಇತ್ತೀಚೆಗೆ ಕುಟುಂಬ ಸಮೇತ ವೀಕ್ಷಣೆ ಮಾಡಿದೆ. 12ನೇ ಶತಮಾನದಲ್ಲಿ ಇಡೀ ವಿಶ್ವಕ್ಕೆ ಸಾಮಾಜಿಕ ಸಮಾನತೆ ಸಾರಿದ ಬಸವಣ್ಣ ಹಾಗೂ 770 ಶರಣರು ಕೂಡಿ ನಾಡಿನ ಜನರಿಗೆ ಅತ್ಯುತ್ತಮ ಸಾಮಾಜಿಕ ನ್ಯಾಯ, ನೀತಿ ನೀಡಿರುವುದರಿಂದ ಅವರನ್ನು ಈಗಲೂ ನೆನೆಯುತ್ತೇವೆ. ಪ್ರಜೆಗಳ ಕುಂದುಕೊರತೆಯನ್ನು ಆಲಿಸಿ, ಚರ್ಚಿಸಿ ನ್ಯಾಯ ನೀಡಿರುವ ಅನುಭವ ಮಂಟಪವಿದು. ಬಿಜ್ಜಳ ರಾಜ ಹಾಗೂ ಕ್ರಾಂತಿಕಾರಿ ಬಸವಣ್ಣ ಅವರು ಇದ್ದು ಕಾರ್ಯಭಾರ ಮಾಡಿದ್ದ ಕಲ್ಲಿನಕೋಟೆ ಹಾಳು ಬಿದ್ದಿರುವುದನ್ನು ನೋಡಿ ನೋವಾಯಿತು. ಜೀರ್ಣೋದ್ಧಾರ ಮಾಡುವುದರಿಂದ ಕೋಟೆ ಉಳಿದೀತು, ಉದ್ಯೋಗಾವಕಾಶವೂ ದೊರೆತೀತು. ಸರ್ಕಾರಕ್ಕೆ ಆದಾಯದ ಮೂಲವಾದೀತು.
- ಎಂ.ಆಂಜನೇಯ,ಹಾವೇರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.