ADVERTISEMENT

ವೆಂಕಟಸುಬ್ಬಯ್ಯ ಎಂಬ ‘ಜೀವಿ’

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 19:31 IST
Last Updated 20 ಏಪ್ರಿಲ್ 2021, 19:31 IST

ಕನ್ನಡ ಸಂಸ್ಕೃತಿಯನ್ನು ಎದೆಗೆ

ಇಂಬಿಟ್ಟುಕೊಂಡ ಜಿವಿ
ನಿಮಗೆ ರಾಮಚಂದ್ರ ಶರ್ಮರು

ಇಟ್ಟ ಸಾರ್ಥಕ ಶಬ್ದ ‘ಜೀವಿ’
ನೂರೆಂಟು ಗಾಯತ್ರಿ ಪಠಿಸಿದಿರಿ
ಕನ್ನಡ ಮಂತ್ರವನ್ನು ಎಲ್ಲೆಲ್ಲೂ

ADVERTISEMENT

ಸಾರುತ್ತ ಸಾಗಿದಿರಿ
ಶಬ್ದಬ್ರಹ್ಮ, ಕಾವ್ಯಜೀವಿ,
ಶಿಸ್ತಿನ ವಸ್ತ್ರಜೀವಿ, ಜನಜೀವಿ,
ರಸಿಕಜೀವಿ, ಸಂದರ್ಭೋಚಿತ

ವಾಕ್‍ಜೀವಿ ಎನಿಸಿದಿರಿ
ನಿಮ್ಮ ನೆನಪಲಿ ಕನ್ನಡದ ತೇರೆಳೆಯುತ

ಸಾಗುತ್ತೇವೆ ಇನ್ನು ಮುಂದೆ...

ಪ್ರೊ. ಅ.ರಾ.ಮಿತ್ರ,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.