ADVERTISEMENT

ಪಿಂಚಣಿ ಭತ್ಯೆ: ಹಿಮಾಚಲ ಮಾದರಿಯಾಗಲಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:30 IST
Last Updated 6 ನವೆಂಬರ್ 2019, 20:30 IST

ನಾನೊಬ್ಬ ರಾಜ್ಯ ಸರ್ಕಾರದ ನಿವೃತ್ತ ನೌಕರ. ಸರ್ಕಾರ ನೀಡುತ್ತಿರುವ ಪಿಂಚಣಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಆದರೆ, ಆರೋಗ್ಯ ಸಮಸ್ಯೆಗಳಿಂದಾಗಿ ಈ ತುಟ್ಟಿ ಕಾಲದಲ್ಲಿ ಬದುಕು ನಡೆಸುವುದು ಕಷ್ಟವಾಗುತ್ತಿದೆ.

ಹಿಮಾಚಲ ಪ್ರದೇಶವು 2014ರಿಂದ ಸರ್ಕಾರಿ ನೌಕರರಿಗೆ 65, 70 ಮತ್ತು 75 ವರ್ಷ ಪೂರ್ಣಗೊಂಡಾಗ ಕ್ರಮವಾಗಿ ಶೇ 5, 10 ಹಾಗೂ ಶೇ15 ಪಿಂಚಣಿ ಭತ್ಯೆ ಮಂಜೂರು ಮಾಡುತ್ತಿದೆ. ಇದನ್ನು ದೇಶದಲ್ಲಿನ ಎಲ್ಲಾ ರಾಜ್ಯಗಳೂ ಅನುಸರಿಸಿದರೆ ನನ್ನಂತಹ ನಿವೃತ್ತ ನೌಕರರಿಗೆ ಬಹಳ ಅನುಕೂಲ ಆಗುತ್ತದೆ. ಕರ್ನಾಟಕ ಸರ್ಕಾರ ಈ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಆದೇಶವನ್ನು ಹೊರಡಿಸಲಿ.

–ಟಿ.ಜಿ. ಸತೀಶ್, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT