ADVERTISEMENT

ಸರ್ಕಾರದ ನಿಲುವು ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST

400 ಸರ್ಕಾರಿ ಉರ್ದು ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಇದು, ಹಿಂದಿನ ಸಮ್ಮಿಶ್ರ ಸರ್ಕಾರವು ಸಾವಿರ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆರಂಭಿಸಿದ ಇಂಗ್ಲಿಷ್‌ ಮಾಧ್ಯಮದ ಮುಂದುವರಿದ ಕ್ರಮ ಅಷ್ಟೆ. ಈಗ ಎಲ್ಲಿ ಸರ್ಕಾರವು ಇಂಗ್ಲಿಷ್‌ ಮಾಧ್ಯಮವನ್ನು ಆರಂಭ ಮಾಡಿದೆಯೋ ಅಲ್ಲೆಲ್ಲ ಕನ್ನಡ ಮಾಧ್ಯಮಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಉರ್ದು ಶಾಲೆಗಳ ವಿಷಯದಲ್ಲೂ ಮುಂದೆ ಹೀಗೇ ಆಗುವ ಎಲ್ಲ ಸಾಧ್ಯತೆಯೂ ಇದೆ.

ಭಾರತದ ದೇಶಿ ಭಾಷೆಗಳಿಗೆ ಇಂಗ್ಲಿಷ್‌ ಭಾಷೆ ಕಂಟಕ ಆಗಿದ್ದು, ಸರ್ಕಾರಗಳು ಕೂಡ ಅದಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ನಾಡ ಭಾಷೆಗಳ ಉಳಿವಿನ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಮುಂದಿನ ವರ್ಷಗಳಲ್ಲಿ ಈ ಕ್ರಮ ಇನ್ನೂ ವಿಸ್ತಾರಗೊಂಡು, ಕನ್ನಡ ಮತ್ತು ಉರ್ದು ಭಾಷೆಯ ಬೆಳವಣಿಗೆಗೆ ಇನ್ನಷ್ಟು ಅಡ್ಡಿಯಾಗುವುದನ್ನು ನಾವು ವಿಷಾದದಿಂದ ಗಮನಿಸಬೇಕಾಗಬಹುದು.

-ವೆಂಕಟೇಶ ಮಾಚಕನೂರ,ಧಾರವಾಡ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.