ADVERTISEMENT

ಅತಿಥಿ ಉಪನ್ಯಾಸಕರತ್ತ ಗಮನಹರಿಸಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 20:15 IST
Last Updated 16 ಸೆಪ್ಟೆಂಬರ್ 2019, 20:15 IST

ರಾಜ್ಯದ ನೂರಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅವರ ಬೇಡಿಕೆಗಳು ಈಡೇರುತ್ತಿಲ್ಲ.

ಜೆಡಿಎಸ್– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವು ಅತಿಥಿ ಉಪನ್ಯಾಸಕರ ವೇತನವನ್ನು ₹ 5 ಸಾವಿರದಿಂದ 6 ಸಾವಿರದಷ್ಟು ಹೆಚ್ಚಿಸುವುದಾಗಿ ಘೋಷಿಸಿತ್ತು (ಈಗ ಅವರು ₹ 11 ಸಾವಿರ ಮತ್ತು ₹ 13 ಸಾವಿರ ವೇತನ ಪಡೆಯುತ್ತಿದ್ದಾರೆ). ನಂತರದಲ್ಲಿ ಯುಜಿಸಿ, ದೇಶದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳು ಹಾಗೂ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನವನ್ನು ಗರಿಷ್ಠ ₹ 50 ಸಾವಿರದವರೆಗೆ ನಿಗದಿಪಡಿಸಬಹುದೆಂದು ಸೂಚಿಸಿತು.ಆದರೆ, ರಾಜ್ಯ ಸರ್ಕಾರವು ಇದ್ಯಾವುದರ ಪರಿವೆಯೇ ಇಲ್ಲದಂತೆ ವರ್ತಿಸುತ್ತಿದೆ.

2019-20ನೇ ಶೈಕ್ಷಣಿಕ ಸಾಲಿನ ಪದವಿ ತರಗತಿಗಳು ಪ್ರಾರಂಭವಾಗಿ 3 ತಿಂಗಳು ಕಳೆದರೂ ವೇತನ ಪಾವತಿಯಾಗಿಲ್ಲ. ಬೀದಿಗಿಳಿದು ಹೋರಾಡುವುದಕ್ಕಿಂತ ಮೊದಲೇ ಅವರ ದುಃಸ್ಥಿತಿಯನ್ನು ಸರ್ಕಾರ ಕಣ್ತೆರೆದು ನೋಡಲಿ.

ADVERTISEMENT

-ಪ್ರೊ.ಎ.ವೈ.ಸೋನ್ಯಾಗೋಳ,ಪಾಶ್ಚಾಪೂರ, ಹುಕ್ಕೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.