ಗಡಿಗೆ ಸಂಬಂಧಿಸಿದ ಈಗಿನ ಸಮಸ್ಯೆಗಳಿಗೆ ಕೇಂದ್ರದಲ್ಲಿ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕಾರಣ ಎಂದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಅವರು ಆಪಾದನೆ ಮಾಡಿರುವುದು ಎಸ್ಟು ಸರಿ? ಇಂದಿನ ರಾಜಕಾರಣದಲ್ಲಿ ಎಲ್ಲ ಸಮಸ್ಯೆಗಳಿಗೂ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆಯುತ್ತಿದೆ. ಪಾಕಿಸ್ತಾನದೊಂದಿಗಿನ ಸಮಸ್ಯೆಗೆ ಮಹಾತ್ಮ ಗಾಂಧಿ, ಚೀನಾ ಸಮಸ್ಯೆಗೆ ನೆಹರೂ, ಆರ್ಥಿಕ ಸ್ಥಿತಿಗೆ ಮನಮೋಹನ್ ಸಿಂಗ್ ಕಾರಣ ಎಂಬ ಆರೋಪಗಳು ಕೇಳಿಬರುತ್ತವೆ. ಸಮಯಕ್ಕೆ ಅನುಗುಣವಾಗಿ ಸ್ಪಂದಿಸದ ನಾವೇ ಎಲ್ಲ ಸಮಸ್ಯೆಗಳಿಗೂ ಮೂಲ ಎಂದು ಅರ್ಥಮಾಡಿಕೊಳ್ಳದೆ, ಚಿಕ್ಕಪುಟ್ಟ ಸಮಸ್ಯೆಗಳನ್ನು ಸ್ವತಃ ಹುಟ್ಟುಹಾಕಿ, ಅದರಲ್ಲಿ ನಾವೇ ಸಿಲುಕಿಕೊಂಡು ಅನುಭವಿಸುತ್ತಿರುವ ಬವಣೆಗಳಿಗೆ ಯಾರು ಕಾರಣ?
–ಎಚ್.ಎಸ್.ಚಂದ್ರಶೇಖರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.