‘ಒಲ್ಲೆ, ನಾನೊಲ್ಲೆ’ ಎಂದು ಕಿರುಚಾಡಿದರೂ ಬಿಡದೆ, ಬಲವಂತವಾಗಿ ಜಿ.ಟಿ. ದೇವೇಗೌಡರನ್ನು ಉನ್ನತ ಶಿಕ್ಷಣ ಸಚಿವ ಸ್ಥಾನದಲ್ಲಿ ಪ್ರತಿಷ್ಠಾಪಿಸಿದುದರ ಹಿಂದಿನ ತರ್ಕವೇ ಅರ್ಥವಾಗಲಿಲ್ಲ.
‘ಯೋಗ್ಯ ವ್ಯಕ್ತಿಗೆ ಯೋಗ್ಯ ಸ್ಥಾನ’ (Right Man for the Right Job) ಎಂಬ ವಿಶ್ವಮಾನ್ಯ ತತ್ವಕ್ಕೆ ವಿರುದ್ಧವಾಗಿ, ‘ಕೆಲಸ ಮಾಡೋರಿಗೆ ಯಾವ ಖಾತೆ ಆದ್ರೇನು’ ಎಂಬ ಅಸಡ್ಡಾಳ ಸಮರ್ಥನೆಯೊಂದಿಗೆ ದೇವೇಗೌಡರಿಗೆ ನೀಡಿದ
ಖಾತೆ ನಿಜ ಅರ್ಥದಲ್ಲಿ ಅವರಿಗೆ ನೀಡಿದ ಶಿಕ್ಷೆಯೋ, ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಶಿಕ್ಷೆಯೋ ಅಥವಾ ಇವೆರಡೂ ಹೌದೋ ಎಂಬುದು ಗೊಂದಲಮಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.