ADVERTISEMENT

ಹುಕ್ಕಾ ಬಾರ್‌: ಯುವಜನರನ್ನು ಪಾರು ಮಾಡಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2020, 20:04 IST
Last Updated 28 ಜನವರಿ 2020, 20:04 IST

ಬೆಂಗಳೂರಿನಲ್ಲಿ ಅನಧಿಕೃತ ಹುಕ್ಕಾ ಬಾರ್‌ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪೋಷಕರ ಕಣ್ಣಿಗೆ ಮಣ್ಣೆರಚಿ, ತಮ್ಮ ಅಮೂಲ್ಯ ಸಮಯ, ಆರೋಗ್ಯ, ಹಣವನ್ನು ಎಗ್ಗಿಲ್ಲದೇ ಹುಕ್ಕಾ ಬಾರ್‌ಗಳಿಗೆ ವಿನಿಯೋಗಿಸುತ್ತಾ ಈ ಚಟಕ್ಕೆ ದಾಸರಾಗುತ್ತಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರವು ಹುಕ್ಕಾ ಬಾರ್‌ಗಳನ್ನು ಮುಚ್ಚಿಸಿ, ನಾಳಿನ ಪ್ರಜೆಗಳನ್ನು ಅದರ ಹಿಡಿತದಿಂದ ಪಾರು ಮಾಡಬೇಕು.

– ಮಂದಾರ ಬಿ.ಆರ್.,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT