‘ದೇಶದಲ್ಲಿ ಹಸಿವಿಗೆ
56 ಬಲಿ’ (ಪ್ರ.ವಾ., ಸೆ. 22)
(ಅಂಕಿ ಅಂಶಗಳ ಮಾಹಿತಿ ಎಂದೂ
ನಿಖರವಲ್ಲ, ಅಂತಿರಲಿ).
ಈ ದಿನಗಳಲ್ಲೂ ಆಹಾರಕ್ಕಾಗಿ
‘ಹಾಹಾಕಾರ’ವೆ?
ಹಸಿವಿನಿಂದ ಸಾವೆ?
ಸರ್ವೋದಯಕ್ಕೆ ಅರ್ಥವೆಲ್ಲಿ?
ಎಲ್ಲರೂ ಸದಾ ಜಪಿಸುವ
ಅಭಿವೃದ್ಧಿಯ ಮಾತು ಏನಾಯಿತು?
ಉದರ ತುಂಬದೆ ಉದ್ಧಾರವೆ?–
ಇಂಥ ಅಂತವಿರದ (ದುರಂತ?)
ಪ್ರಶ್ನೆ ಪರಂಪರೆಗೆ ಉತ್ತರ
ಕೊಡುವವರಾದರೂ ಯಾರು?
ಬ್ರಹ್ಮ, ಹರಿ, ಹರ?
–ಸಿ.ಪಿ.ಕೆ.,ಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.