ಹೈದರಾಬಾದ್ ಎನ್‌ಕೌಂಟರ್ ಅನ್ನು ವಿರೋಧಿಸಿರುವ ನಾರಾಯಣ ಎ. ಅವರ ‘ಇದ್ಯಾವ ಸೀಮೆ ಹೀರೊಯಿಸಂ?’ ಎಂಬ ಲೇಖನದ (ಪ್ರ.ವಾ., ಡಿ. 9) ಹಲವಾರು ವಿಷಯಗಳು ಒಪ್ಪಲು ಅರ್ಹವಾಗಿವೆ. ಆದರೆ, ಈ ಎನ್‍ಕೌಂಟರ್‌ನಲ್ಲಿ ಹತ್ಯೆಯಾದ ಆಪಾದಿತರು ಪ್ರಬಲರಾಗಿರಲಿಲ್ಲ, ಹಣಬಲದಿಂದ ವಕೀಲರನ್ನು ಹಿಡಿದು ನೇಣಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವಂಥವರು ಆಗಿರಲಿಲ್ಲ ಎಂದು ಲೇಖಕರು ಪ್ರತಿಪಾದಿಸಿರುವುದನ್ನು ಸದ್ಯದ ಪರಿಸ್ಥಿತಿಯಲ್ಲಿ ಒಪ್ಪುವುದು ಕಷ್ಟ.
ನಿರ್ಭಯಾ ಅತ್ಯಾಚಾರದಲ್ಲಿ ಭಾಗಿಯಾಗಿದ್ದವರೂ ಅಷ್ಟೇನೂ ಪ್ರಬಲರಾಗಿರಲಿಲ್ಲ. ಆದರೆ, ಈಗ ಅವರು ನ್ಯಾಯಾಲಯದಲ್ಲಿ ಹೋರಾಡುತ್ತಿರುವ ಪರಿಯನ್ನು ಗಮನಿಸಿದರೆ, ಅವರಿಗೆ ಸಹಾಯ ಮಾಡುತ್ತಿರುವವರಾರು, ಅವರಿಗೆ ವಿಧಿಸಿರುವ ಶಿಕ್ಷೆ ಇನ್ನೂ ಏಕೆ ಜಾರಿಯಾಗಿಲ್ಲ, ಇನ್ನಾದರೂ ಆಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಗಳು, ಅನುಮಾನಗಳು ಮೂಡದೇ ಇರವು.
ನವೀನ ವಿ., ಭದ್ರಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.