ADVERTISEMENT

ಒಳಒಪ್ಪಂದ ನಿಜವೇ?

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 20:01 IST
Last Updated 28 ಅಕ್ಟೋಬರ್ 2018, 20:01 IST

‘ಚಾಮುಂಡೇಶ್ವರಿಯಲ್ಲಿ ತೊಡೆ ಮುರಿದಿದ್ದೇವೆ’ (ಪ್ರ.ವಾ., ಅ. 27) ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ವಿರುದ್ಧ ಮೈಸೂರು- ಕೊಡಗು ಕ್ಷೇತ್ರದ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಈ ಹೇಳಿಕೆ ನನ್ನಲ್ಲಿ ಗೊಂದಲ ಮೂಡಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಿದ್ದರಾಮಯ್ಯ ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಅರ್. ಗೋಪಾಲರಾವ್ ವಿರುದ್ಧ ಭಾರಿ ಅಂತರದಲ್ಲಿ ಗೆದ್ದದ್ದು ಜಾತ್ಯತೀತ ಜನತಾದಳದ ಜಿ.ಟಿ. ದೇವೇಗೌಡ ಅಲ್ಲವೇ? ಹಾಗಿದ್ದಲ್ಲಿ ಬಿಜೆಪಿಯಾಗಲೀ ಪ್ರತಾಪ್ ಸಿಂಹ ಅವರಾಗಲೀ ಯಾವ ಕಡೆಯಿಂದ ಸಿದ್ದರಾಮಯ್ಯನವರ ತೊಡೆ ಮುರಿದರು?

‘ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಒಳಒಪ್ಪಂದ ಮಾಡಿಕೊಂಡಿವೆ’ ಎಂದು ಚುನಾವಣಾಪೂರ್ವದಲ್ಲಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರು. ಅದು ನಿಜವಾಗಿತ್ತೇ? ನಿಜವೇನು ಎಂಬುದನ್ನು ಪ್ರತಾಪ್‌ ಸಿಂಹ ಅವರೇ ನಾಡಿನ ಜನರಿಗೆ ತಿಳಿಸಬೇಕು.

ADVERTISEMENT

ಜಯ್ ಕಲ್ಯಾಣ ರಾಮನ್,ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.