ADVERTISEMENT

ಇಲ್ಲ’ ಎಂಬ ಸಿದ್ಧ ಉತ್ತರ!

ಚನ್ನು ಅ.ಹಿರೇಮಠ ರಾಣಿಬೆನ್ನೂರು
Published 11 ಜುಲೈ 2018, 17:04 IST
Last Updated 11 ಜುಲೈ 2018, 17:04 IST

ಜನಸಾಮಾನ್ಯರ ಆರೋಗ್ಯ ರಕ್ಷಣೆಯ ಕಾಳಜಿಯೊಂದಿಗೆ, ಕಡಿಮೆ ಬೆಲೆಯಲ್ಲಿ ಉತ್ತಮ ಔಷಧಗಳು ಲಭ್ಯವಾಗಲಿ ಎಂಬ ಸದಾಶಯದಿಂದ ದೇಶದ ಎಲ್ಲೆಡೆ ಜನೌಷಧ ಮಳಿಗೆಗಳನ್ನು ತೆರೆಯಲಾಗಿದೆ. ಆದರೆ ಬಹುತೇಕ ಮಳಿಗೆಗಳಲ್ಲಿ ರೋಗಿಗಳು ಕೇಳಿದ ಬಹಳಷ್ಟು ಔಷಧಗಳು ಸಿಗುತ್ತಿಲ್ಲ. ಕೇಳಿದಾಗಲೆಲ್ಲ ‘ದಾಸ್ತಾನು ಖಾಲಿಯಾಗಿದೆ, ಇನ್ನೂ ಬಂದಿಲ್ಲ, ಈಗ ಬರುತ್ತಿಲ್ಲ’ ಇತ್ಯಾದಿ ಕಾರಣಗಳನ್ನು ಅಂಗಡಿಯವರು ಹೇಳುತ್ತಿದ್ದಾರೆ. ಹೀಗಾದರೆ ಈ ಮಳಿಗೆಗಳನ್ನು ತೆರೆದ ಉದ್ದೇಶ ಸಫಲವಾಗುವುದಾದರೂ ಹೇಗೆ?

ಇದರಲ್ಲಿ ಔಷಧ ಕಂಪನಿಗಳವರ ಲಾಬಿ ಕೆಲಸ ಮಾಡುತ್ತಿದೆಯೇ ಅಥವಾ ಪಾರದರ್ಶಕತೆ ಮಾಯವಾಗಿದೆಯೇ ತಿಳಿಯುತ್ತಿಲ್ಲ. ಮೊದಲೆಲ್ಲ ಸರಿಯಾಗಿ ಕಾರ್ಯನಿರ್ವಹಿಸಿದ ಈ ಮಳಿಗೆಗಳು ಇತ್ತಿತ್ತಲಾಗಿ ‘ಇಲ್ಲ’ವೆಂಬ ಸಿದ್ಧ ಉತ್ತರವನ್ನು ನೀಡುತ್ತಿವೆ. ಸಂಬಂಧಿತ ಇಲಾಖೆ ಗಮನಹರಿಸಿ ಜನರ ಬವಣೆ ನೀಗಿಸಲಿ.

-ರಾಣೆಬೆನ್ನೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.