ಪುತ್ತೂರು ನಗರದಲ್ಲಿ ‘ಡಾ. ಕೋಟ ಶಿವರಾಮ ಕಾರಂತ ಬಾಲವನ’ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಪರ್ದಿಯಲ್ಲಿ ಇಲ್ಲಿ ಹತ್ತು ಹಲವು ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕಾಗಿದ್ದರೂ ಬೆರಳೆಣಿಕೆ ಸಂಖ್ಯೆಯಲ್ಲಿ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿವೆ.
ಸಾಹಿತ್ಯ ಕೃತಿಗಳ ಗ್ರಂಥಾಲಯವಿಲ್ಲ, ‘ಮಲ್ಟಿ ಜಿಮ್’ ಸಾಧನಗಳಿಂದಾಗಿ ಒಂದು ಕಟ್ಟಡ ವ್ಯರ್ಥವಾಗಿದೆ. ಶಿವರಾಮ ಕಾರಂತರು 40 ವರ್ಷ ನೆಲೆಸಿದ್ದ ‘ಬಾಲವನ’ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದಕ್ಕೆ ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸ್ಪಷ್ಟ ನೀತಿ ಇಲ್ಲದಿರುವುದು ಹಾಗೂ ಯೋಜನೆಗಳ ಜಾರಿಗೆ ಸಮಿತಿ ಇಲ್ಲದಿರುವುದರಿಂದ ರಾಜ್ಯ ಸರ್ಕಾರದಿಂದ ₹ 1 ಕೋಟಿ ಅನುದಾನ ದೊರಕಿದ್ದರೂ ಕೆಲಸಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಸಾರ್ವಜನಿಕರನ್ನು ಸೆಳೆಯುವ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಸಕ್ತಿ ತೋರಿಸೀತೇ?
– ಕೆ. ಸುಧೀರ್ ರಾವ್, ಪುತ್ತೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.