ADVERTISEMENT

ಸತ್ಯಾರ್ಥಿ ಕೂಗು ಆಲಿಸದವರು

ಡಾ.ಶಿವರಾಜ ಯತಗಲ್
Published 15 ಜನವರಿ 2019, 19:45 IST
Last Updated 15 ಜನವರಿ 2019, 19:45 IST

ಮಕ್ಕಳ ಹಕ್ಕಿಗಾಗಿ ನಿರಂತರವಾಗಿ ಹೋರಾಡುತ್ತಾ ಬಂದಿರುವ, ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿಯವರು ಮಕ್ಕಳ ಹಕ್ಕುಗಳ ಬಗ್ಗೆ ರಾಜಕೀಯ ನೇತಾರರು ನಿರ್ಲಕ್ಷ್ಯ ತೋರುತ್ತಿರುವ ಕುರಿತು ಇತ್ತೀಚೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ದೇಶದಲ್ಲಿ ಜಾನುವಾರುಗಳಿಗಿಂತ ಅಗ್ಗದ ಬೆಲೆಯಲ್ಲಿ ಮಕ್ಕಳ ಮಾರಾಟ ನಡೆಯುತ್ತಿದ್ದರೂ ಚಳಿಗಾಲದ ಅಧಿವೇಶನದಲ್ಲಿ ಜನಪ್ರತಿನಿಧಿಗಳು ರಾಜ್ಯಸಭೆಯಲ್ಲಿ ಮಕ್ಕಳ ಕಳ್ಳಸಾಗಣೆ ತಡೆ ಮಸೂದೆ ಬಗ್ಗೆ ಚರ್ಚಿಸಲು ವಿಫಲರಾಗಿದ್ದಾರೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಮಕ್ಕಳ ಬಾಲ್ಯವನ್ನು ಹಾಳು ಮಾಡುತ್ತಿರುವ ಇಂಥ ದೊಡ್ಡ ಸಮಸ್ಯೆಗಳ ಬಗ್ಗೆ ಚರ್ಚಿಸದ ರಾಜಕಾರಣಿಗಳ ನಡೆ ಕೈಲಾಶ್ ಅವರಿಗೆ ಮಾತ್ರವಲ್ಲ ಇಡೀ ಸಮಾಜಕ್ಕೆ ನೋವು ತರುವಂತಹ ಸಂಗತಿ. ಪ್ರಜಾಪ್ರಭುತ್ವದ ದೇವಾಲಯವೆಂದೇ ಹೆಸರಾದ ಸಂಸತ್ತು ಇಂದು ಎತ್ತ ಸಾಗಿದೆ ಎಂಬ ಸತ್ಯಾರ್ಥಿಯವರ ಪ್ರಶ್ನೆಯು ಸಾಮಾಜಿಕ ಕಳಕಳಿಯುಳ್ಳ ಎಲ್ಲರಲ್ಲೂ ಮೂಡುವಂತಾಗಿದೆ.

ಲಿಂಗಸುಗೂರು

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.