ಕನ್ನಡದ ಕೆಲವು ಟಿ.ವಿ. ವಾಹಿನಿಗಳಲ್ಲಿ ಏರುಸಂಜೆ ಹೊತ್ತಿಗೆ ಕಾಂಡೋಮ್ ಜಾಹೀರಾತು ಪ್ರಸಾರಗೊಳ್ಳುತ್ತಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಹಿರಿಯರು, ಮಕ್ಕಳು ಕುಳಿತು ಸಂಜೆ ವೇಳೆ ವಾರ್ತೆ, ಮನರಂಜನೆಯಂತಹ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿರುತ್ತಾರೆ. ಇಂತಹ ಅವಧಿಯಲ್ಲಿ ಕಾಂಡೋಮ್ ಜಾಹೀರಾತು ಪ್ರಸಾರ ಮಾಡುವುದು ಎಷ್ಟರಮಟ್ಟಿಗೆ ಸರಿ? ಇದರಿಂದ ಮಕ್ಕಳ ಎದುರು ಹಿರಿಯರು ಮುಜುಗರ ಅನುಭವಿಸಬೇಕಾದ ಸಂಕಷ್ಟ ಎದುರಾಗುತ್ತಿದೆ.
ಸಂಬಂಧಪಟ್ಟವರಿಗೆ ಈ ಕುರಿತಾದ ಸೂಕ್ಷ್ಮಗ್ರಹಿಕೆ ಏಕಿಲ್ಲ? ಇಷ್ಟಕ್ಕೂ ಇಂತಹ ಜಾಹೀರಾತನ್ನು ಪ್ರೈಮ್ ಟೈಮ್ ಸಮಯ ಮುಗಿದ ಬಳಿಕ, ಅಂದರೆ, ರಾತ್ರಿ 11ರ ನಂತರ ಪ್ರಸಾರ ಮಾಡಬಹುದು. ಮಕ್ಕಳ ವಯೋಸಹಜ ಕುತೂಹಲಭರಿತ ಸೋಜಿಗದ ಪ್ರಶ್ನೆಗಳಿಂದ ಮನೆಯ ಹಿರಿಯರು ಮುಜುಗರ ಅನುಭವಿಸುವಂತೆ ಆಗಬಾರದು.
-ಭಾರತಿ ಎಂ. ಕುಲಕರ್ಣಿ, ಕಲಬುರ್ಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.