ಕರುನಾಡು ಬರದಿಂದ ತತ್ತರಿಸಿರುವಾಗ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ಮಾಡಿಸುವ ಅವಶ್ಯಕತೆ ಇದೆಯೇ? ದೇವಸ್ಥಾನಕ್ಕೆ ಭಕ್ತರಿಂದ ಬಂದ ದೇಣಿಗೆಯನ್ನು ಜನರಿಗಾಗಿಯೇ ವೆಚ್ಚ ಮಾಡುವ ಒಳ್ಳೆಯ ಕೆಲಸಗಳು ಏಕೆ ನಡೆಯಬಾರದು? ಕಡುಬಡತನದಿಂದ ಹಸಿವು, ಶಿಕ್ಷಣದಿಂದ ವಂಚಿತರಾಗುತ್ತಿರುವ ಎಷ್ಟೊಂದು ಮಕ್ಕಳಿದ್ದಾರೆ. ಅಂಥವರ ಏಳ್ಗೆಗಾಗಿ ಈ ದೇವಸ್ಥಾನದ ಹಣವನ್ನು ಉಪಯೋಗಿಸಬಹುದು ಅಲ್ಲವೇ?
ಭಕ್ತಾದಿಗಳ ಕಾಣಿಕೆಯನ್ನು ಜನಸೇವೆಗಾಗಿ ಉಪಯೋಗಿಸುವ ಮಹತ್ವದ ಕೆಲಸದಿಂದ, ಸುಬ್ರಹ್ಮಣ್ಯನಿಗೆ ಚಿನ್ನದ ರಥದಲ್ಲಿ ಮೆರವಣಿಗೆ ಹೋಗುವುದಕ್ಕಿಂತಲೂ ಹೆಚ್ಚು ನೆಮ್ಮದಿ ಸಿಗಬಹುದು. ಹೀಗೇ ಎಲ್ಲ ದೇವಸ್ಥಾನಗಳ ನಿಧಿಗಳನ್ನೂ ಬಡಜನರ ಸೇವೆಗಾಗಿ ಉಪಯೋಗಿಸಿದರೆ, ನಮ್ಮ ದೇಶ ಬಡತನದಿಂದ ಮುಕ್ತಿ ಪಡೆದು ಅತಿ ವೇಗವಾಗಿ ಪ್ರಗತಿಯೆಡೆಗೆ ಸಾಗುವುದು ನಿಶ್ಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.